Kundapra.com ಕುಂದಾಪ್ರ ಡಾಟ್ ಕಾಂ

ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಕೋಟಿ-ಚೆನ್ನಯ ಕ್ರೀಡೋತ್ಸವ ಉದ್ಘಾಟನೆ

ಸ್ಪರ್ಧಾತ್ಮಕ ಯುಗದಲ್ಲಿ ಸ್ವರ್ಧಾ ಮನೋಭಾವ ಬೆಳೆಸಿಕೊಳ್ಳುವುದೂ ಅಗತ್ಯ: ಸೂರ್ಯ ಎಸ್. ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬಯಿ,ಜ.11:
ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ನುಡಿದರು.

ಅವರು ಜ.8 ರಂದು ಸಯನ್ ಪೂರ್ವ ಜಿಟಿಬಿ ನಗರದಲ್ಲಿರುವ ಗುರುನಾನಾಕ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾಲಕರು ತಮ್ಮ ಮಕ್ಕಳಿಗೆ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಸಮುದಾಯ ಸಂಘಟನೆಗಳಲ್ಲಿ ಸಕ್ರಿಯಗೊಳ್ಳುವಂತೆ ಮಾಡಬೇಕು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದಾಗ ಇನ್ನು ಹಲವಾರು ಕಾರ್ಯಕ್ರಮಗಳನ್ನು ನೀಡುವ ಪ್ರೇರಣೆ ದೊರೆಯುತ್ತದೆ ಎಂದರು.

ಮುಖ್ಯ ಅತಿಥಿ ಅಂತರಾಷ್ಟ್ರೀಯ ಕರಾಟೆ ಪಟು ವಿಜಯ ಪೂಜಾರಿ ಕೋಟ ಮಾತನಾಡಿ, ನಾನು ಮಹಾನಗರಕ್ಕೆ ಬಂದು ಕ್ಯಾಂಟೀನ್ ಮತ್ತು ಹೋಟೆಲ್ಗಳಲ್ಲಿ ದುಡಿದು ಏನಾದರೂ ಸಾಧಿಸಬೇಕೆನ್ನುವ ಉದ್ದೇಶದಿಂದ ಕ್ರೀಡಾ ಕ್ಷೇತ್ರಕ್ಕೆ ಬಂದೆ ಕರಾಟೆಯು ನನ್ನನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿತು ಈಗಾಗಲೆ ನಾನು ೫೮ ಚಿನ್ನದ ಪದಕ, 38 ಬೆಳ್ಳಿ ಪದಕ ಮತ್ತು 45 ಕಂಚಿನ ಪದಕಗಳನ್ನು ಪಡೆದಿದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ ಹಾಗೇಯೇ ನಮ್ಮ ಸಮುದಾಯದ ಯುವ ಜನರು ಒಂದು ನಿರ್ದಿಷ್ಟವಾದ ಗುರಿಯೊಂದಿಗೆ ಮುನ್ನೆಡೆಯಿರಿ ಯಶಸ್ಸು ನಿಮ್ಮದಾಗಲಿದೆ ಎಂದರು

ಗೌರವ ಅತಿಥಿಗಳಾದ ನಗರದ ಖ್ಯಾತ ಶಿಶುತಜ್ಞ ಡಾ| ಶೇಖರ್ ಹೆಮ್ಮಾಡಿ ಮಾತನಾಡಿ, ಕ್ರೀಡೆಯಿಂದ ಆರೋಗ್ಯ ವೃದ್ಧಿ ಯಾಗುವುದರೊಂದಿಗೆ ಮನಸ್ಸು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳಬಹುದು ನಮ್ಮ ಕುಂದಾಪುರ ಬಿಲ್ಲವ ಸಂಘ ಸಮಾಜ ಬಾಂಧವರ ಆರೋಗ್ಯದ ದೃಷ್ಠಿಯಿಂದ ಹಾಗೂ ಒಗ್ಗಟ್ಟಿಗಾಗಿ ಪ್ರತಿವರ್ಷ ಅದ್ಧೂರಿಯಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು ತಾವೆಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸಮಾಜ ಬಾಂಧವರೊಂದಿಗೆ ಬೆರೆಯುವ ಅವಕಾಶ ಸಿಗುತ್ತದೆ ಎಂದರು

ಸಂಘದ ಮಾಜಿ ಅಧ್ಯಕ್ಷರು ನ್ಯಾಯವಾದಿ ಆನಂದ ಎಮ್. ಪೂಜಾರಿ ಮಾತನಾಡುತ್ತಾ ಸಂಘದ ಕ್ರೀಡಾ ಕೂಟದಲ್ಲಿ ಪುಟಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಕ್ರೀಡೋತ್ಸವಕ್ಕೆ ಮೆರಗು ತಂದಿದ್ದಾರೆ ಮುಂಬರುವ ದಿನಗಳಲ್ಲಿ ಈ ಪುಟಾಣಿಗಳು ಶ್ರೇಷ್ಠ ಕ್ರೀಡಾ ಪಟುಗಳಾಗಿ ಸಂಘಕ್ಕೆ ಹೆಸರು ತರುವುದರಲ್ಲಿ ಸಂದೇಹವಿಲ್ಲ ಎಂದರು

ಮುಖ್ಯ ಅತಿಥಿ ತಿಮ್ಮಪ್ಪ ಸಿ. ಪೂಜಾರಿ ಏಳಜಿತ್ ಹಾಗೂ ಯುವ ಆಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಧ್ವಜಾರೋಹಣಗೈದು ಬಲೂನುಗಳನ್ನು ಆಕಾಶಕ್ಕೆ ಹಾರಿಸಿ ಕುಂದಾಪುರ ಬಿಲ್ಲವ ಕೋಟಿ-ಚೆನ್ನಯ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕ್ರೀಡಾಳುಗಳಿಂದ ಆಕರ್ಷಕ ಪಥ ಸಂಚಲನ ನೆಡೆಯಿತು. ಮುಖ್ಯ ಅತಿಥಿ ಕರಾಟೆ ಪಟು ವಿಜಯ ಪೂಜಾರಿ ಕೋಟ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು ನಿವೃತ್ತ ಶಿಕ್ಷಕ ಕ್ರೀಡಾ ಕೂಟದ ತೀರ್ಪುಗಾರ ಅಮರೀಶ್ ಪಾಟೀಲ್ ಕ್ರೀಡಾ ಪತಿಜ್ಞಾ ವಿಧಿ ಬೋಧಿಸಿದರು

ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಉದ್ಯಮಿ ತಿಮ್ಮಪ್ಪ ಸಿ. ಪೂಜಾರಿ ಏಳಜಿತ್, ಕರಾಟೆ ಪಟು ವಿಜಯ ಪೂಜಾರಿ ಕೋಟ, ಶಿಶು ತಜ್ಞ ಡಾ| ಶೇಖರ ಹೆಮ್ಮಾಡಿ, ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಆನಂದ ಎಂ. ಪೂಜಾರಿ ಸಂಘದ ಉಪಾಧ್ಯಕ್ಷ ನರಸಿಂಹ ಎಮ್. ಬಿಲ್ಲವ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಕಾರ್ಯದರ್ಶಿ ಮನೀಷಾ ಎಮ್. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿದ್ದ ಗಣ್ಯರಿಗೆ ಯುವ ಅಭ್ಯುದಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪುಷ್ಪಗುಚ್ಚ ನೀಡಿ ಗೌರವಿಸಿದರು. ರಾಜಶ್ರೀ ಸಾಲ್ಯಾನ್, ದಿವ್ಯಾ ಪೂಜಾರಿ, ಜ್ಯೋತಿ ಪೂಜಾರಿ ಪ್ರಾರ್ಥಿಸಿದರು, ಉಪಾಧ್ಯಕ್ಷ ನರಸಿಂಹ ಎಂ. ಬಿಲ್ಲವ ಸ್ವಾಗತಿಸಿದರೆ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮದ ನಿರ್ವಹಣೆಗೈದರು ಸಂಘದ ಜತೆ ಕಾರ್ಯದರ್ಶಿ ಹರೀಶ್ ಎನ್. ಪೂಜಾರಿ ವಂದಿಸಿದರು ಬಳಿಕ ಸದಸ್ಯರು ಮತ್ತು ಸದಸ್ಯರ ಮಕ್ಕಳ ವಿವಿಧ ವಯೋಮಿತಿಗೆ ಅನುಗುಣವಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ಆರಂಭಿಸಲಾಯಿತು

Exit mobile version