Kundapra.com ಕುಂದಾಪ್ರ ಡಾಟ್ ಕಾಂ

ಜ.26ರಿಂದ ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘ ಕಾರ್ಯಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಹೇರಂಜಾಲು, ಕಾಲ್ತೋಡು, ಕಂಬದಕೋಣೆ ಹಾಗೂ ಪರಿಸರದ ಜನತೆಯ ಆರ್ಥಿಕ ಸವಲತ್ತು ಮತ್ತು ಅಭಿವೃದ್ಧಿಗಾಗಿ ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘ ಸ್ಥಾಪಿಸಲಾಗಿದ್ದು, ಸಾಮಾಜಿಕ ಸೇವೆಯೇ ನಮ್ಮ ಧ್ಯೇಯ ಎಂಬ ಘೋಷ ವಾಕ್ಯದೊಂದಿಗೆ ಜ.26ರಂದು ಕಾರ್ಯಾರಂಭ ಮಾಡಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ ಹೇಳಿದರು.

ಜೆ.ಎನ್.ಎಸ್ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾಗಿ ನೂತನ ಉದ್ಯಮ ಆರಂಭಿಸುವ ಉದ್ದೇಶದಿಂದ ಹಿರಿಯ ಹಾಗೂ ಕಿರಿಯ ಉತ್ಸಾಹಿ ಯುವಕರ ತಂಡದೊಂದಿಗೆ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡು ಸಹಕಾರಿ ಸಂಸ್ಥೆಯನ್ನು ಹುಟ್ಟುಹಾಕಿ ವೃತ್ತಿಪರ, ಸಂಪೂರ್ಣ ಗಣಕೀಕೃತದಿಂದ ಕೂಡಿದ ಸುಸಜ್ಜಿತ ವ್ಯವಸ್ಥೆಯೊಂದಿಗೆ ಸಂಸ್ಥೆಯನ್ನು ಬಲಿಷ್ಠವಾಗಿ ಕಟ್ಟುವ ಕೆಲಸ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧೆಡೆ ಹತ್ತು ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ನೊಂದಣಿಗೊಂಡ ತಿಂಗಳ ಅವಧಿಯಲ್ಲಿ 500ಕ್ಕೂ ಮಿಕ್ಕಿ ಎ ತರಗತಿ ಸದಸ್ಯರು ಸೇರ್ಪಡೆಗೊಂಡು ಪಾಲು ಬಂಡವಾಳ ಹಾಗೂ ನಿರೀಕ್ಷೆಗೂ ಮೀರಿ ಠೇವಣಿ ಸಂಗ್ರಹಣೆಯಾಗುವಲ್ಲಿ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಜ.26ರಂದು ಕಾರ್ಯಾರಂಭ:
ಶಾಸಕ ಬಿ. ಎಂ ಸುಕುಮಾರ ಶೆಟ್ಟಿ ನೂತನ ಕಛೇರಿಯನ್ನು ಉದ್ಘಾಟಿಸಲಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭದ್ರತಾ ಕೊಠಡಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಗಣಕೀಕರಣ ವಿಭಾಗ, ಬೈಂದೂರು ತಾಲೂಕು ರೈತಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಿದ್ದಾರೆ. ಕೋಟೇಶ್ವರದ ಯುವಮೇರಿಡಿಯನ್ ಮಾಲಕ ಉದಯಕುಮಾರ್ ಶೆಟ್ಟಿ ಷೇರುಪತ್ರ, ಖಂಬದಕೋಣೆ ರೈತರ ಸೇವಾ ಸಹಾಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಠೇವಣಿಪತ್ರ, ದ.ಕ. ಜಿಲ್ಲಾ ಕೇಂದ್ರ ಸಹಾಕಾರಿ ಬ್ಯಾಂಕಿನ ನಿರ್ದೇಶಕ ಎಸ್ .ರಾಜು ಪೂಜಾರಿ ಸಾಲಪತ್ರ ಬಿಡುಗಡೆ ಮಾಡಲಿದ್ದಾರೆ. ವಿಜಯಾ ಬ್ಯಾಂಕಿನ ನಿವತ್ತ ಡಿಜಿಎಂ ಆನಂದ ಶೆಟ್ಟ ಅಲ್ದಾಡಿ, ತಾಪಂ ಮಾಜಿ ಸದಸ್ಯ ಎಚ್. ವಿಜಯ ಶೆಟ್ಟಿ ಹೇರಂಜಾಲು, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ ಅತುಲ್‌ಕುಮಾರ್ ಶೆಟ್ಟಿ, ಸಹಾಕಾರ ಸಂಘಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ. ಆರ್., ಕರ್ಣಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಮಂಜುನಾಥ ಎಸ್. ಕೆ. ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷ ಪದ್ಮನಾಭ ಮೇರ್ಟ, ಮಹಾಲಸಾ ಮಾಲಕಾಂಬ ದೇವಸ್ಥಾನದ ಮೊಕ್ತೇಸರ ರಾಮಯ್ಯ ಅರ್ಚಕ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಯೋಜಕ ವಿಜಯ್ ಬಿ, ಎಸ್. ನಿವತ್ತ ಸಹಕಾರಿ ಕೆ. ಪುಂಡಲೀಕ ನಾಯಕ್ ಉಪಸ್ಥಿತರಿರಲಿದ್ದಾರೆ ಎಂದರು.

ಸಂಸ್ಥೆಯ ಶುಭಾರಂಭದ ಪ್ರಯುಕ್ತ ಖ್ಯಾತ ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಉಡುಪಿ ಇವರಿಂದ ಜೀವನ ಮೌಲ್ಯಗಳು ಮತ್ತು ಹಾಸ್ಯ ಎಂಬ ವಿಶೇಷ ಕಾರ್ಯಕ್ರಮ. ಡಾ. ಗಣೇಶ್ ಗಂಗೊಳ್ಳಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ. ರಾತ್ರಿ ಬೊಳಂಬಳ್ಳಿ ಮೇಳ ಮತ್ತು ಅಥಿತಿ ಕಲಾವಿದರಿಂದ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು. ಉಪಾಧ್ಯಕ್ಷ ಕಿರಣ್ ಶೆಟ್ಟಿ ಕುದ್ರುಕೋಡು, ನಿರ್ದೆಶಕರಾದ ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಸುಭಾಶ್ಚಂದ್ರ ಶೆಟ್ಟಿ ಹಳಗೇರಿ ಇದ್ದರು.

Exit mobile version