ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜ.25: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2013-14 ರಿಂದ 2018-19, 2019-20 ಮತ್ತು 2020-21ನೇ (ಜುಲೈ /ಜನವರಿ) ಆವೃತ್ತಿ ಅನುತ್ತೀರ್ಣರಾದ ಹಾಗೂ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳು, 2021-22 ನೇ (ಜನವರಿ) ಶೈಕ್ಷಣಿಕ ಸಾಲಿನ ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ, ಡಿಪ್ಲೋಮಾ ಸರ್ಟಿಫಿಕೇಟ್ ಮತ್ತು ಎಂ.ಎ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ, ವಿದ್ಯಾರ್ಥಿಗಳಿಗೆ, 2018-19, 2020-21 ನೇ (ಜನವರಿ ಆವೃತ್ತಿ) ಅನುತ್ತೀರ್ಣರಾದ ಹಾಗೂ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ, 2021-22 ನೇ (ಜನವರಿ ಆವೃತ್ತಿ) ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ ಮತ್ತು ಎಲ್ಲಾ ಡಿಪ್ಲೋಮಾ ಸರ್ಟಿಫಿಕೇಟ್ ಹಾಗೂ ಎಂ.ಎ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ ನ ವಿದ್ಯಾರ್ಥಿಗಳು ಮತ್ತು 2013-14, 2019-20 ನೇ (ಜುಲೈ /ಜನವರಿ) ಆವೃತ್ತಿಯ ಮತ್ತು 2020-21 ಹಾಗೂ 2021-22 ನೇ ಸಾಲಿನಲ್ಲಿ ಅನುತ್ತೀರ್ಣರಾದ, ಪರೀಕ್ಷೆ ತೆಗೆದುಕೊಂಡಿಲ್ಲದ ಹಾಗೂ ಹೊಸದಾಗಿ ಪರೀಕ್ಷೆ ಬರೆಯುವ ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬಹುದುದಾಗಿದೆ.
2001-02 ರಿಂದ 2014-15 ನೇ ಸಾಲಿನ ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ, ಬಿ.ಇಡಿ ಮತ್ತು ಎಂ.ಇಡಿ, ಎಂ.ಎ, ಎಂ.ಕಾA, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ, ಬಿ.ಎಡ್, ಎಂ.ಎಡ್ ಮತ್ತು ಬಿ.ಎಡ್ (ವಿಶೇಷ ಶಿಕ್ಷಣ), ಎಲ್.ಎಲ್.ಎಂ, ಎಂ.ಟಿ.ಎA ವಿಷಯಗಳ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಫೆಬ್ರವರಿ 6 ಮತ್ತು 200 ರೂ ದಂಡ ಶುಲ್ಕದೊಂದಿಗೆ ಫೆಬ್ರವರಿ 13 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ www.ksoumysuru.ac.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.