ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಮತದಾರರ ದಿನ ಆಚರಣೆಯನ್ನು ಪ್ರತಿಜ್ಞಾ ವಿಧಿ ಭೋಧಿಸುವುದರ ಮೂಲಕ ಆಚರಿಸಲಾಯಿತು.
ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿಯಾದ ಸಂಗೀತಾ ಶೆಟ್ಟಿ ಬಗ್ವಾಡಿ ಭೋಧಿಸಿ ವಿದ್ಯಾರ್ಥಿಗಳಲ್ಲಿ ಮತಧಾನದ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ ವಹಿಸಿ ಮತದಾನದ ಹಕ್ಕು ಮತ್ತು ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಪೂರ್ಣಿಮಾ ಎನ್ ಜೋಯಿಸ್, ಗೋಪಾಲ ದೇವಾಡಿಗ, ಜ್ಯೋತಿ ಬಿ ಶೆಟ್ಟಿ, ರಾಮನಾಯ್ಕ ಕೆ.ಬಿ ಪ್ರಥಮ ದರ್ಜೆ ಸಹಾಯಕರಾದ ದಿನಕರ ಶೆಟ್ಟಿ ಹರ್ಕಾಡಿ, ಹಾಗೂ ಯತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ನಾಗರಾಜ ಅಡಿಗ ನೀಲಾವರ ನಿರ್ವಹಿಸಿದರು, ಉಪನ್ಯಾಸಕ ವಾಸುದೇವ ಉಡುಪ ಮಸ್ವಾಡಿ ವಂದನಾರ್ಪಣೆಗೈದರು.