Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಸ್ಥಾನಿಕ ಬ್ರಾಹ್ಯಣರ ಸಂಘದ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕು ಸ್ಥಾನಿಕ ಬ್ರಾಹ್ಯಣರ ಸಂಘದ ೨೮ನೇ ವಾರ್ಷಿಕೋತ್ಸವ ಸಮಾರಂಭವು ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಾಹ್ಮಿ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಎಂ. ಸತ್ಯನಾರಾಯಣ ಹೆಬ್ಬಾರ್ ಮರೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು.

ಇನ್ನೊರ್ವ ಮುಖ್ಯ ಅತಿಥಿ ಧನಂಜಯ್ ಕುಮಾರ್ ನ್ಯಾಯವಾದಿಗಳು ಬೆಳ್ತಂಗಡಿ ಮಾತನಾಡಿ ಸಂಘ ನಮಗೇಕೆ ಬೇಕು ಎನ್ನುವುದರ ಬಗ್ಗೆ ಸವಿಸ್ತರವಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಸುಬ್ರಾಯ ಹೆಗ್ಗಡೆ ಇಳಿ ಉದ್ಘಾಟಸಿದರು ಶೃಂಗೇರಿ ಶ್ರೀಗಳವರಿಂದ ಶ್ರೀ ಭಾರತೀ ತೀರ್ಥಪುರಾಸ್ಕಾರ್ ಪ್ರಶಸ್ತಿ ಪಡೆದಿರುವ ಸಮಾಜದ ಸತ್ಯ ಶಂಕರ ಬೊಳ್ಳಾವ ಧರ್ಮಾಧಿಕಾರಿಗಳು ಶ್ರೀ ಶೃಂಗೇರಿ ಮಠ ಕೋಟೆಕಾರು ಇವರನ್ನು ಗೌರವಿಸಲಾಯಿತು. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವೇಶ್ವರ ರಾಮ್ ಹೊಸ್ಕೋಟೆ ಹಾಗೂ ಪ್ರಭಾವತಿ ಎಸ್ ಜೋಷಿ ಸಿದ್ಧಾಪುರ ಇವರನ್ನು ಸನ್ಮಾನಿಸಲಾಯಿತು ಉದಯಕುಮಾರ್ ಹೆಬ್ಬಾರ್ ಮ್ಯಾನೇಜಿಂಗ್ ಡೈರೆಕ್ಟರ್ ಕ್ರೆಡಿಟ್ ಎಕ್ಸ್ಸ್ ಗ್ರಾಮೀಣ ಲಿ. ಸರ್ವಿಸ್ ಬೆಂಗಳೂರು ಇವರು ಕೊಡ ಮಾಡಿದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಉಮೇಶ ಶ್ಯಾನುಬೋಗ್ ಶ್ರೀಮೂಕಾಂಬಿಕಾ ಟಿಂಬರ‍್ಸ್ ಮತ್ತು ಮೂಕಾಂಬಿಕಾ ವುಡ್ ಇಂಡಸ್ಟ್ರಿಸ್ ಇವರು ಕೊಡಮಾಡಿದ ಪ್ರತಿಭಾಪುರಸ್ಕಾರವನ್ನು ವಿತರಿಸಲಾಯಿತು. ನಾಗರತ್ನ ಹೆಬ್ಬಾರ್ ಅಬ್ಲಿಕಟ್ಟೆ ಇವರು ಬರೆದ ಕಥಾ ಸಂಚಿಯನ್ನು ಬಿಡುಗಡೆಗೊಳಿಸಲಾಯಿತು

ಸಂಘದ ಗೌರವ ಅಧ್ಯಕ್ಷರಾದ ಕೃಷ್ಣ ಗೋಪಾಲ ಹೆಬ್ಬಾರ್ ಹಾಗೂ ಮಹಿಳಾ ಅಧ್ಯಕ್ಷರು ವಾಣಿಸುಭಾಶ್ ಬಳ್ಕೂರು ಉಪಸ್ಥಿತಿದ್ದರು, ವೈಷ್ಣವಿ ಹೆಗಡೆ ಇಳಲಿ ಪ್ರಾರ್ಥಿಸಿದರು, ರಶ್ಮಿ ಹೆಗಡೆ ಇಳಲಿ ಸ್ವಾಗತಿಸಿದರು ಜಗದೀಶ ರಾವ್ ಹೊಸ್ಕೋಟೆ, ಹಾಗೂ ದಯಾನಂದರಾವ್ ಶಂಕರನಾರಾಯಣ ಇವರುಗಳು ಅತಿಥಿಗಳನ್ನು ಪರಿಚಯಿಸಿದರು. ಪೂರ್ಣಿಮಾ ಉದಯರಾವ್ ಕಾರೆಬೈಲ್ ಹಾಗೂ ವಾಣಿ ಜಗದೀಶ್ ರಾವ್ ಇವರು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಕೆ.ಜಿ ಕೃಷ್ಣ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು, ಪುಷ್ಪಲತಾ ಯು ಶ್ಯಾನುಬೋಗ್ ಹಾಗೂ ಸ್ಮಿತಾ ಪ್ರಸಾದ ಸಹಕರಿಸಿದರು, ಕಾರ್ಯದರ್ಶಿ ಸುಭಾಶ್ಚಂದ್ರ ಬಳ್ಕೂರು ವರದಿ ವಾಚಿಸಿದರು. ಅರುಣ ಶ್ಯಾನುಭೋಗ್ ವಂದಿಸಿದರು, ಆತಿಥ್ಯ ವಹಿಸಿದ ಇಳಲಿ ಸುಬ್ರಾಯ ಹೆಗಡೆ ದಂಪತಿಯನ್ನು ಗೌರವಿಸಲಾಯಿತು, ಗೋಪಾಲ ಕೃಷ್ಣ ಹೆಬ್ಬಾರ್ ಹಾಗೂ ಪ್ರಕಾಶ ಬೈಂದೂರು ಸಹಕರಿಸಿದರು.

Exit mobile version