Kundapra.com ಕುಂದಾಪ್ರ ಡಾಟ್ ಕಾಂ

ಜ.27ರಂದು ಜಡ್ಕಲ್ ವ್ಯ.ಸೇ.ಸ ಸಂಘದ ನೂತನ ಕಟ್ಟಡ ‘ಸಹಕಾರ ಸಿರಿ’ ಉದ್ಘಾಟನಾ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಬೈಂದೂರು ತಾಲೂಕಿನ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ‘ಸಹಕಾರ ಸಿರಿ’ ಇದರ ಉದ್ಘಾಟನಾ ಸಮಾರಂಭವು ಜನವರಿ 27 ಶುಕ್ರವಾರ ಬೆಳಿಗ್ಗೆ ಗಂಟೆ 10:30ಕ್ಕೆ ಸಂಘದ ವಠಾರ ಬೀಸಿನಪಾರೆಯಲ್ಲಿ ನಡೆಯಲಿದೆ.

ನೂತನ ಕಟ್ಟಡ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಪ್ರಧಾನ ಕಛೇರಿಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಭಾಭವನವನ್ನು ವೆ|ಮೂ| ಸೂರ್ಯನಾರಾಯಣ ಭಟ್ ಆಡಳಿತ ಮೊಕ್ತಸರು ಮಹಿಷಮರ್ದಿನಿ ದೇವಸ್ಥಾನ ಸೆಳೋಡು, ಪ್ರೇರಕರ ಕೊಠಡಿಯನ್ನು ರೆ|ಫಾ| ಥೋಮಸ್ ಪಾರೆಕಾಟಿಲ್ ಧರ್ಮಗುರುಗಳು ಸೈಂಟ್ ಜೋರ್ಜ್ ಪೊರೋನ್ ಚರ್ಚ್ ಇವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್. ರಾಜು ಪೂಜಾರಿ ನಿರ್ದೇಶಕ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಎಂ. ಮಹೇಶ್ ಹೆಗ್ಡೆ ನಿರ್ದೇಶಕ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷ ವ್ಯವಸ್ಥಾಪನಾ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಹೆಚ್. ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷ, ಕುಂದಾಪುರ ತಾ| ಕೃಷಿ ಉತ್ಪನ್ನ ಮಾರಾಟ ಸಂಘ ನಿ, ಶ್ರೀಮತಿ ವನಜಾಕ್ಷಿ ಶೆಟ್ಟಿ ಅಧ್ಯಕ್ಷೆ ಗ್ರಾಮ ಪಂಚಾಯತ್ ಜಡ್ಕಲ್, ಲಕ್ಷ್ಮೀ ನಾರಾಯಣ ಜಿ.ಎಸ್ ಸಹಕಾರಿ ಸಂಘಗಳ ಉಪನಿಬಂಧಕ, ಶ್ರೀಮತಿ ಲಾವಣ್ಯ ಕೆ.ಆರ್ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಕುಂದಾಪುರ, ಶ್ರೀಮತಿ ಸಂಗೀತ ಕರ್ತ ಡಿ.ಡಿ.ಎಂ.ನಬಾರ್ಡ್ ಉಡುಪಿ, ದ.ಕ. ಜಿಲ್ಲೆ ಇವರು ಭಾಗವಹಿಸಲಿದ್ದಾರೆ. ದೇವದಾಸ ವಿ.ಜೆ. ಉಪಾಧ್ಯಕ್ಷ, ಶ್ರೀ ವೆಂಕಟರಮಣ ಶರ್ಮ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ನಿರ್ದೇಶಕರಾದ ಸುರೇಂದ್ರ ನಾಯ್ಕ ಜೋಷಿ ಪಿಪಿ, ಮಹಾಬಲ ಪುಜಾರಿ, ಮುಕ್ತ, ಮನೋಜ್ ಟಿ.ಜೆ, ನಾರಾಯಣ ಶೆಟ್ಟಿ, ಜೋಸೆಫ್ ಕೆ.ಎಂ., ವಿನೋದ್ ಜೋರ್ಜ್, ಗುರುರಾಜ ಪುಜಾರಿ, ಶ್ರೀಮತಿ ರೋಸಮ್ಮ ಶ್ರೀಮತಿ ಸವಿತಾ ಶೆಟ್ಟಿ, ಶಿವರಾಮ್ ಪೂಜಾರಿ ಯಡ್ತರೆ, ವಲಯ ಮೇಲ್ವಿಚಾರಕ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿರಲಿದ್ದಾರೆ.

Exit mobile version