Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಕರಾವಳಿ ಸಂಭ್ರಮ – 2023 ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು.ಜ.31: ಕೇವಲ ಅಭಿವೃದ್ದಿ ಕಾರ್ಯಗಳು ಮಾತ್ರ ಊರಿನ ಬೆಳವಣಿಗೆಯನ್ನು ಬಿಂಬಿಸಿವುದಿಲ್ಲ ಬದಲಾಗಿ ಆ ಊರಿನ ಕಲೆ, ಸಂಸ್ಕ್ರತಿಯ ಜೊತೆಗೆ ಚಟುವಟಿಕೆ ಕೂಡ ಊರಿನ ಕೀರ್ತಿಯನ್ನು ಹೆಚ್ಚಿಸುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು

ಶಿರೂರು ಕರಾವಳಿ ಸಂಭ್ರಮ - 2023 | ಯುವಶಕ್ತಿ ಕರಾವಳಿ, ಅರುಣ್ ಪಬ್ಲಿಸಿಟಿ ಶಿರೂರು | ಶಿರೂರು ಕರಾವಳಿಯಿಂದ ನೇರಪ್ರಸಾರ

ಅವರು ಯುವಶಕ್ತಿ ಕರಾವಳಿ ಹಾಗೂ ಅರುಣ್ ಪಬ್ಲಿಸಿಟಿ ಇವರ ಸಹಯೋಗದಲ್ಲಿ ನಡೆದ ಕರಾವಳಿ ಸಂಭ್ರಮ – 2023 ಎರಡನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕರಾವಳಿ ಸಂಭ್ರಮ ಮಾದರಿ ಉತ್ಸವವಾಗಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ ಮಾತನಾಡಿ ಶಿರೂರಿನಲ್ಲಿ ನಡೆದ ಕರಾವಳಿ ಉತ್ಸವದ ಕಾರ್ಯಕ್ರಮ ಸಂಘಟಿಸುವ ಇತರ ಸಂಯೋಜಕರಿಗೆ ಮಾದರಿಯಾಗಿದೆ. ಅದ್ಬುತ ಕಾರ್ಯಕ್ರಮದ ಮೂಲಕ ಊರಿನ ಅಭಿವೃದ್ದಿಗೆ ಶ್ರಮಿಸುವ ಯುವಶಕ್ತಿ ಒಗ್ಗಟ್ಟು ಪ್ರಶಂಶನೀಯ ಎಂದರು.

ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಮಾಲಾ ಮಹಾದೇವ ಮೇಸ್ತ,ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸದನ್‌ದಾಸ್, ಉದ್ಯಮಿ ರಾಮ ಎ.ಮೇಸ್ತ, ಮಣೆಗಾರ್ ಜಿಪ್ರಿ ಸಾಹೇಬ್, ಧ.ಗ್ರಾ.ಯೋಜನೆಯ ಬಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ, ಉದ್ಯಮಿ ಎಸ್. ಪ್ರಕಾಶ ಪ್ರಭು, ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಅಳ್ವೆಗದ್ದೆ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಮೊಗೇರ್, ಉದ್ಯಮಿ ಕೃಷ್ಣ ಪೂಜಾರಿ ಅರಮನೆಹಕ್ಲು, ಹಿರಿಯ ಕೃಷಿಕ ವೆಂಕಟ ಪೂಜಾರಿ ಕಾಳನಮನೆ, ಯುವಶಕ್ತಿ ಅಧ್ಯಕ್ಷ ವಿಠ್ಠಲ ಬಿಲ್ಲವ, ನೂರ್ ಮಹ್ಮದ್, ಜೋಗೂರು ಈಶ್ವರ ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಪೂಜಾರಿ, ಶಿರೂರು ಹಿರಿಯ ನಾಗರೀಕರ ವೇದಿಕೆ ಅಧ್ಯಕ್ಷ ಎಚ್. ಚಂದ್ರಶೇಖರ ಶೆಟ್ಟಿ, ಹಡವಿನಕೋಣೆ ಗಣೇಶ ಯುವಕ ಮಿತ್ರ ಮಂಡಳಿ ಅಧ್ಯಕ್ಷ ಅಣ್ಣಪ್ಪ ವಿ.ಮೇಸ್ತ, ನಾಗಪ್ಪಯ್ಯ ಆಚಾರ್ ಕೋಣೆಮನೆ, ನಾಗಪ್ಪ ಗಾಣಿಗ ಉಗ್ರಾಣಿಮನೆ, ಕೋಟಿ ಪೂಜಾರಿ ಮೇಲ್ಪಂಕ್ತಿ, ದಾಸನಾಡಿ ವೆಂಕಟರಮಣ ದೇವಸ್ಥಾನದ ಅರ್ಚಕ ರವೀಂದ್ರ ಅಯ್ಯಂಗಾರ್, ಹಿರಿಯರಾದ ನಾಗೇಶ ಮೇಸ್ತ ನಾಗಿನಗದ್ದೆ, ಗಣಪ ದೇವಾಡಿಗ ಪೇಟೆತೊಪ್ಪಲು, ಕೃಷ್ಣ ಪೂಜಾರಿ ದೊಂಬೆ, ನಾಗೇಂದ್ರ ಪೂಜಾರಿ ದೊಂಬೆ, ಜೋಸೆಫ್ ಫೆರ್ನಾಂಡೀಸ್ ದೊಂಬೆ, ಸದ್ಗುರು ಕಲಾ ಸಂಸ್ಥೆಯ ರಾಘವೇಂದ್ರ ಶಿರೂರು, ಗುಲಾಬಿ ಶೆಡ್ತಿ, ಮಾಜಿ ಅಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ, ಅಣ್ಣಪ್ಪ ಮೊಗೇರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರಾವಳಿ ಉತ್ಸವದ ಸಂಯೋಜಕ ಅರುಣ್ ಕುಮಾರ್ ಶಿರೂರು, ಯುವಶಕ್ತಿ ಅಧ್ಯಕ್ಷ ವಿಠ್ಠಲ ಬಿಲ್ಲವ, ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ಹಾಗೂ ಪತ್ರಕರ್ತ ಗಿರೀಶ್ ಕರಾವಳಿ ಯವರನ್ನು ಗೌರವಿಸಲಾಯಿತು.

ಗಣಪತಿ ಬಿಲ್ಲವ ಸ್ವಾಗತಿಸಿದರು. ಅರುಣ್ ಶಿರೂರು ಪ್ರಾಸ್ತಾವಿಕ ಮಾತಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ವಂದಿಸಿದರು.

ಎರಡು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ವಿವಿಧ ಸ್ವರ್ಧೆಗಳು, ಗಾಳಿಪಟ ಉತ್ಸವ, ಯಕ್ಷಗಾನ, ನೃತ್ಯ, ಸ್ಟಾರ್ ನೈಟ್ – ಸಂಗೀತ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳು ಜರುಗಿದವು.

Exit mobile version