Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ವಡೆರಹೋಬಳಿ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಯರಿಗೆ ಮಾರ್ಗದರ್ಶನ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ಮಧುಸೂದನ ಡಿ ಕುಶೆ ಪ್ರೌಢಶಾಲೆ ವಡೆರಹೋಬಳಿ ಕುಂದಾಪುರ ಇದರ ಇಂಟರಾಕ್ಟ್ ಕ್ಲಬ್ ವತಿಯಿಮಧ ಹತ್ತನೆ ತರಗತಿಯ ವಿದ್ಯಾರ್ಥಿಯರಿಗೆ 2022-23ನೇ ಸಾಲಿನ ಪರಿಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ರೊ. ಕುಮಾರ್ ಎಸ್ ಕಾಂಚನ್ ಪರೀಕ್ಷೆ ಭಯ, ಪರೀಕ್ಷೆ ಎದುರಿಸುವ ರೀತಿ, ಪರೀಕ್ಷೆಗೆ ತಯಾರಿ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಮಕ್ಕಳ ಮನಸ್ಸು ನಾಟುವ ರೀತಿಯಲ್ಲಿ ಮಾತನಾಡಿ ಶುಭ ಹಾರೈಸಿದರು. ರೋಟರಿ ಕುಂದಾಪುರದ ಅಧ್ಯಕ್ಷರು ರೊ.ವೆಂಕಟೇಶ್ ನಾವುಂದ ಇಂಟರಾಕ್ಟ್ ಚೇರ್ಮನ್ ರೊ ರಾಘವೇಂದ್ರ ಗೋಪಾಡಿ ಶುಭಾಶಯಗೈದರು. ಮುಖ್ಯ ಶಿಕ್ಷಕಿ ತೇಜಸ್ವಿನಿ ಸ್ವಾಗತಿಸಿದರು, ಶಿಕ್ಷಕಿ ಜ್ಯೋತಿ ಧನ್ಯವಾದ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Exit mobile version