Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮೈ ಒವ್ನ್ ಗಾರ್ಮೆಂಟ್ಸ್‌ನ 3ನೇ ಮಳಿಗೆಯ ಶುಭಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಮೈ ಒವ್ನ್ ಗಾರ್ಮೆಂಟ್ಸ್‌ನ 3ನೇ ಮಳಿಗೆಯನ್ನು ಇಂದು ಗಂಗೊಳ್ಳಿಯ ಮುಖ್ಯ ರಸ್ತೆಯ್ಲಲಿರುವ ಸೆಂಟ್ರಲ್ ಪ್ಲಾಜಾದಲ್ಲಿ ಶುಭಾರಂಭಗೊಂಡಿತು.

ಈ ವೇಳೆ ಜರುಗಿದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಖ್ಯಾತ ವಕೀಲರಾದ ರವಿಕಿರಣ್ ಮುರುಡೇಶ್ವರ ಅವರು ಕಲ್ಪವೃಕ್ಷಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗಂಗೊಳ್ಳಿಯ ಜಮತುಲ್ ಮುಸ್ಲಿಮೀನ್ ಕಮೀಟಿಯ ಅಧ್ಯಕ್ಷರಾದ ಜನಾಬ್ ಹಸೈನಾರ್ ಪಿಎಂ ರವರು ಮಾತನಾಡಿ ಶುಭಹಾರೈಸಿದರು.

ಮೈ ಒವ್ನ್ ಗ್ರಾಮೆಂಟ್ಸ್ ಗಂಗೊಳ್ಳಿಯ ಮಳಿಗೆಯ ಉದ್ಘಾಟನೆಯನ್ನು ಗಂಗೊಳ್ಳಿ ಜುಮಾ ಮಸೀದಿಯ ಖತೀಬರಾದ ಮುಝಮ್ಮಿಲ್ ಮೌಲಾನಾ, ಗಂಗೊಳ್ಳಿ ಚರ್ಚ್ ನ ಧಾರ್ಮ ಗುರುಗಳಾದ ರೇ.ಫಾ.ಥಾಮಸ್ ರೋಷನ್ ಡಿಸೋಜಾ, ಕುಂದಾಪುರದ ಉದಯ ಜ್ಯುವೆಲ್ಸ್ ಮಾಲಕರಾದ ಉದಯ ಶೇಟ್ ಹಾಗೂ ಜೈ ಭೀಮ್ ಗಂಗೊಳ್ಳಿಯ ಅಧ್ಯಕ್ಷರಾದ ಜಗದೀಶ್ ಗಂಗೊಳ್ಳಿ ಯವರು ನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ಗಂಗೊಳ್ಳಿಯ ಸುಲ್ತಾನ್ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ಷರೀಫ್ ಸಹಾದಿ, ಬೈಂದೂರು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಸುಧಾಕರ ಆಚಾರ್ಯ, ಕುಂದಾಪುರ ಪುರಸಭಾ ಸದಸ್ಯರಾದ ಅಬು ಮೊಹಮ್ಮದ್ ಮುಜಾವರ್, ಬೈಂದೂರು ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಉಪಾಧ್ಯಕ್ಷರಾದ ಅಬೂಬಕ್ಕರ್ ನಾಖುದಾ ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ತಬ್ರೇಜ್ ಖಲೀಫ್ ಯವರು ಮುಖ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಜನಾಬ್ ಇಬ್ರಾಹಿಂ ಎಂ.ಹೆಚ್ (MHI ಆಂಬುಲೆನ್ಸ್ ಸರ್ವಿಸ್), ಜನಾಬ್ ಷಹಜಹಾನ್ ಸಾಹೇಬ್ (ಅಧ್ಯಕ್ಷರು, ಎಸ್.ಎಸ್.ಸಿ ಅಸೋಸಿಯೇಷನ್), ದಿನೇಶ್ ಖಾರ್ವಿ ಗಂಗೊಳ್ಳಿ ಹಾಗೂ ಸತೀಶ್ ಖಾರ್ವಿ ಕುಂದಾಪುರ ( ಅಂತರ್ರಾಷ್ಟ್ರೀಯ ಮಟ್ಟದ ದೇಹದ್ರಾಡ್ಯ ಪಟು) ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಮೌಲಾನಾ ಝಮೀರ್ ಅಹಮೆದ್ ರಷಾದಿಯವರು ಪ್ರಾರ್ಥಿಸಿದರು, ಹುಸೈನ್ ಹೈಕಾಡಿ ಯವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು ಹಾಗೂ ಮೈ ಒವ್ನ್ ನ ಸಹ ಮಾಲಕಿಯಾದ ಫಾರ್ವ್ಹಾ ಫಝಲ್ ರವರು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿ ವಂದಿಸಿದರು. ಹಾಗೂ ಜನಾಬ್ ಫಝಲ್ ರಹ್ಮಾನ್ ಎಂ.ಹೆಚ್. ಧನ್ಯವಾದ ಸಮರ್ಪಣೆಯನ್ನು ಮಾಡಿದರು.

ಗಂಗೊಳ್ಳಿಯ ಮೈ ಒವ್ನ್ ಗಾರ್ಮೆಂಟ್ಸ್ ನ ಉದ್ಘಾಟನಾ ಕಾರ್ಯಕ್ರಮಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಶರತ್ ಶೆಟ್ಟಿ, ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ವಿನಯ್ ಕೊರಳಹಳ್ಳಿ, ಗಂಗೊಳ್ಳಿ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿಯಾದ ಜಯಶ್ರೀ ಹುನ್ನೂರು, ಗಂಗೊಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀನಿವಾಸ ಖಾರ್ವಿ ಹಾಗೂ ಉಪಾಧ್ಯಕ್ಷೆ ಯಾದ ಪ್ರೇಮ ಪೂಜಾರಿಯವರು ಆಗಮಿಸಿ ಶುಭಹಾರೈಸಿದರು.

ಮೈ ಒವ್ನ್ ಗಾರ್ಮೆಂಟ್ಸ್ ಮಾಲಕರಾದ ಅಬ್ದುಲ್ ಫತಾಹ್ ಎಂ.ಎಚ್ ರವರು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು.

Exit mobile version