Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್, ಕುಂದಾಪುರ ಮತ್ತು ಹಿಂದೂ ಅಭ್ಯುದಯ ಸಂಘ(ರಿ.), ನಾವುಂದ ಇವರ ಜಂಟಿ ಆಶ್ರಯದಲ್ಲಿ, ಇಂದು ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಮಂಗಳೂರಿನ, ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರ ಸಹಕಾರದಿಂದ ನಡೆದ ಸೂಪರ್ ಸ್ಪೆಷಾಲಿಟಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು, ಕುಂದಾಪುರ ರೋಟರಿಯ ಅಧ್ಯಕ್ಷರಾದ ವೆಂಕಟೇಶ ಗಾಣಿಗ ನಾವುಂದ ಇವರು ನೆರವೇರಿಸಿದರು.

ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ| ಸಂದೀಪ ಮತ್ತು ಡಾ| ಸಂಜಯ್, ಹಿಂದೂ ಅಭ್ಯುದಯ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ನಾವುಂದ, ಸದಸ್ಯರಾದ ಸುದರ್ಶನ ಗಾಣಿಗ, ಪ್ರಭಾಕರ ಶೆಟ್ಟಿ, ಮನೋಹರ ಎನ್.ಕೆ., ಗುರುರಾಜ ಶೇಟ್, ಮಂಜುನಾಥ ಆರ್. ಗಾಣಿಗ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂ ಅಭ್ಯುದಯ ಸಂಘದ ಅಧ್ಯಕ್ಷರಾದ ಶಶಿಧರ ಎಂ. ಶೆಟ್ಟಿ ಇವರು ಸ್ವಾಗತಿಸಿದರೆ, ಕುಂದಾಪುರ ರೋಟರಿಯ ಕಾರ್ಯದರ್ಶಿ ನಾಗರಾಜ ಶೆಟ್ಟಿ ವಂದಿಸಿದರೆ, ಹಿಂದೂ ಅಭ್ಯುದಯ ಸಂಘದ ಕಾರ್ಯದರ್ಶಿ ಎ. ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದಲ್ಲಿ ಸಾಮಾನ್ಯ, ಮೂಳೆ, ದಂತ ಮತ್ತು ಸ್ತ್ರೀ ರೋಗಗಳ ತಜ್ಞರು ಉಪಸ್ಥಿತರಿದ್ದು, 200 ಕ್ಕೂ ಮಿಕ್ಕಿ ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು. ಸುಮಾರು 50 ಕ್ಕೂ ಮಿಕ್ಕಿ ಜನರು ಉಚಿತವಾಗಿ ಇ.ಸಿ.ಜಿ. ಪರೀಕ್ಷೆಯನ್ನು ಮಾಡಿಸಿಕೊಂಡರು.

Exit mobile version