ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ನಡುವೆ ಕೆಲಸ ಮಾಡುವ ಲೈನ್ ಮ್ಯಾನ್ ಗಳು ದೇಶ ಕಾಯುವ ಯೋಧರಿಗೆ ಸಮಾನ. ಮಳೆ ಗಾಳಿ ಬಿಸಿಲು ಚಳಿ ಎನ್ನದೆ ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಅಪಾಯಕಾರಿ ವಿದ್ಯುತ್ ಜೊತೆ ಕೆಲಸ ಮಾಡುವ ಇವರುಗಳು ನಮ್ಮ ಹೆಮ್ಮೆಯ ಸೈನಿಕರಿದ್ದಂತೆ ಎಂದು ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಜೆಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಯವರು ಹೇಳಿದರು.
ಜೆ ಸಿ ಐ ಉಪ್ಪುಂದದ ವತಿಯಿಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಸಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮದಲ್ಲಿ ಮೆಸ್ಕಾಂ ಬೈಂದೂರು ಉಪ ವಿಭಾಗದಲ್ಲಿ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಜೆಸಿ ಅನುದೀಪ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಲಯ ನಿರ್ದೇಶಕರಾದ ಜೆಸಿ ನಾಗರಾಜ್ ಪೂಜಾರಿ, ಲೇಡಿ ಜೆಸಿ ಸಂಯೋಜಕರಾದ ಜೆಸಿ ರೇಖಾ, ಜೂನಿಯರ್ ಜೆಸಿ ಅಧ್ಯಕ್ಷರಾದ ಜೆಜೆಸಿ ನಿಶಾ ಶೆಟ್ಟಿ, ಹಾಗೂ ಅನುದೀಪ ಅವರ ಪತ್ನಿ ಉಷಾ ಉಪಸ್ಥಿತರಿದ್ದರು.
ಪೂರ್ವ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಜಿ ಉಪ್ಪುಂದ ಸ್ವಾಗತಿಸಿದರು, ಜೆಸಿ ಪ್ರಕಾಶ್ ಭಟ್, ಜೆಸಿ ಗುರುರಾಜ್ ಹೆಬ್ಬಾರ್, ಜೆಸಿ ಶ್ರೀ ಗಣೇಶ್, ಜೆಸಿ ಕೃಷ್ಣಮೂರ್ತಿ ಶುಭ ಹಾರೈಸಿದರು, ಪೂರ್ವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜೆಸಿ ಪುರಂದರ ಧನ್ಯವಾದ ಸಮರ್ಪಿಸಿದರು.