Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಇನ್ನರ್ ವೀಲ್ ಕ್ಲಬ್: 25ನೇ ವಾರ್ಷಿಕೋತ್ಸವ ಹಾಗೂ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಇನ್ನರ್ ವೀಲ್ ಕ್ಲಬ್ ನ 25ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ಇತ್ತೀಚಿಗೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿತು.

ಬೈಂದೂರು ಇನ್ನರ್ ವೀಲ್ ಕ್ಲಬ್ ಗೆ ಭೇಟಿ ನೀಡಿದ ಇನ್ನರ್ ವೀಲ್ ಕ್ಲಬ್ 318 ಇದರ ಜಿಲ್ಲಾ ಚೇರ್ಮನ್ ಕವಿತಾ ನಿಯಾತ್ ಕ್ಲಬ್ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಂದೂರು ಇನ್ನರ್ವೀಲ್ ಕ್ಲಬ್ ಚಾರ್ಟರ್ ಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಹಾಗೂ ಕ್ಲಬ್ಬಿನ ಅಧ್ಯಕ್ಷೆ ಭಾನುಮತಿ ಜಯಾನಂದ್ ಬಿ. ಕೆ. ಕಾರ್ಯದರ್ಶಿ ಪಿಂಕಿ ಮೋಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೈಂದೂರು ಇನ್ನರ್ ವೀಲ್ ಕ್ಲಬ್ ನ ಮಾತೃ ಸಂಸ್ಥೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಶುಭಹಾರೈಸಿದರು.

ಡಿಸ್ಟಿಕ್ ಚೇರ್ಮೆನ್ ಕವಿತಾನಿಯತ್ ಬೈಂದೂರಿನ ಜನತಾ ಹೈಸ್ಕೂಲ್ನಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನೀಡಿದ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ಮಾಡಲಾಯಿತು. ಬೈಂದೂರಿನ ಜೂನಿಯರ್ ಕಾಲೇಜಿಗೆ ವೀಲ್ ಚೇರ್ ನೀಡಲಾಯಿತು ಹಾಗೂ ಕಳೆದ 25 ವರ್ಷಗಳ ಬೈಂದೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷರಾದ ಭಾನುಮತಿ ಜಯಾನಂದ್ ಬಿ. ಕೆ ಸ್ವಾಗತಿಸಿ, ಕಾರ್ಯದರ್ಶಿ ಪಿಂಕಿಯವರು ಈ ಸಾಲಿನ ವರದಿಯನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭೋಜನಕೂಟ ಜರುಗಿತು.

Exit mobile version