Kundapra.com ಕುಂದಾಪ್ರ ಡಾಟ್ ಕಾಂ

ಫೆ.25ರಂದು ಬೈಂದೂರು ಪೃಥ್ವಿ ಕ್ರೀಡಾ ಮತ್ತು ಯುವಕ ಸಂಘದ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಪೃಥ್ವಿ ಕ್ರೀಡಾ ಮತ್ತು ಯುವಕ ಸಂಘದ 30ನೇ ವಾರ್ಷಿಕೋತ್ಸವ ಹಾಗೂ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ‘ಪ್ರಥ್ವಿ ಟ್ರೋಫಿ – 2023’ ಫೆ.25ರ ಶನಿವಾರ ಸಂಜೆ 5 ಗಂಟೆಯಿಂದ ಬೈಂದೂರು ಗಾಂಧಿ ಮೈದಾನದಲ್ಲಿ ಜರುಗಲಿದೆ.

ಪಂದ್ಯಾಟದ ಪೂರ್ವದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದ್ದು, ಈ ವೇಳೆ ಸಾಧಕ ಕ್ರೀಡಾಪಟುವಿಗೆ ‘ಪ್ರಥ್ವಿ ಕ್ರೀಡಾ ರತ್ನ ಪ್ರಶಸ್ತಿ 2023’ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಯಾನಂದ ಹೋಬಳಿದಾರ್ ತಿಳಿಸಿದ್ದಾರೆ.

Exit mobile version