Kundapra.com ಕುಂದಾಪ್ರ ಡಾಟ್ ಕಾಂ

ಅಗಲಿದ ಸಂಗೀತ ಗುರು ಅನಂತ ಎಂ. ಹೆಬ್ಬಾರ್ ಅವರಿಗೆ ಶ್ರದ್ಧಾಂಜಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಗಲಿದ ಹಿಂದೂಸ್ಥಾನಿ ಗಾಯಕ, ಸಂಗೀತ ಗುರು, ವಿದ್ವಾನ್ ಅನಂತ ಎಂ. ಹೆಬ್ಬಾರ್ ಅವರಿಗೆ ನಾವುಂದ ಮಸ್ಕಿಯ ಶ್ರೀ ದುರ್ಗಾಪರಮೇಶ್ವರಿ ಕಲಾನಿಕೇತನದಲ್ಲಿ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಗೀತ ಗುರು ವಿದ್ವಾನ್ ಶರತ್ ನಾಡ, ಅನಂತ ಹೆಬ್ಬಾರ್ ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಸಂಗೀತ ಕಲಾ ತರಗತಿಗಳನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತವನ್ನು ಪರಿಚಯಿಸಿ, ಅದನ್ನು ಬೆಳೆಸಲು ಶ್ರಮಿಸುತ್ತಿದ್ದರು. ಅವರು ಹಲವು ಶಿಷ್ಯರನ್ನು ರೂಪಿಸಿದ್ದು, ಅವರ ಅಗಲುವಿಕೆಯಿಂದ ಇಲ್ಲಿನ ಸಂಗೀತ ಕ್ಷೇತ್ರ ಬಡವಾಗಿದೆ. ವಿದ್ಯಾರ್ಥಿಗಳ ನೆಚ್ಚಿನ ಗುರು ಇಲ್ಲವಾಗಿದ್ದಾರೆ ಎಂದರು.

ಸಮಾಜ ಸೇವಕ ಮಂಜುನಾಥ ಸಾಲಿಯಾನ್, ಸಂಗೀತ ಪ್ರೇಮಿ ನಾಗರಾಜ ದೇವಳಿ, ವಿದ್ಯಾರ್ಥಿಗಳು ಮತ್ತು ಪೋಷಕರು ಅಗಲಿದ ಹೆಬ್ಬಾರರಿಗೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.

Exit mobile version