Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಾಹಿತಿ ಕೆ. ವಿ. ತಿರುಮಲೇಶ್ ಅವರಿಗೆ ನುಡಿ ನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಮುದಾಯ ಕುಂದಾಪುರದ ತಿಂಗಳ ಓದು ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಕೆವಿ ತಿರುಮಲೇಶ್ ರವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕೆವಿ ತಿರುಮಲೇಶ್ ರವರ ಆರ್ತರು, ಕೀರ್ತನೆ, ರಾಜಧಾನಿಯ ಭಾಷೆ, ನೂರು ಮಂದಿ ಮನುಷ್ಯರು, ಮುಖಾಮುಖಿ, ಹಾಸಿಗೆ, ಮಂಡೂಕ ರಾಜ್ಯ, ಸರ್ಕಸ್, ಪೆಂಟಯ್ಯನ ಅಂಗಿ ಮುಂತಾದ ಕವಿತೆಗಳನ್ನು ಸಮುದಾಯ ಕುಂದಾಪುರದ ಸದಸ್ಯರು ವಾಚಿಸಿದರು.

ಸಾಹಿತಿ ಮುರುಳಿಧರ ಉಪಾಧ್ಯಾಯ ಅವರು ಕೆ ವಿ ತಿರುಮಲೇಶ್ ರವರ ಕವಿತೆಗಳು ಬದುಕು ಮತ್ತು ಬರಹ ವಿಮರ್ಶೆ ಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು.

ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದಗೈದರು.

Exit mobile version