Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರಿನಲ್ಲಿ ನಿಲ್ಲದ ರೌಡಿಗಳ ದಾಂದಲೆ: ಕ್ಯಾಂಡಿಮೆಂಟ್ಸ್ ಗಾಜು ಪುಡಿಗೈದು ಬೆದರಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಮಾ.01 :
ಬೆಂಗಳೂರು ನಗರದಲ್ಲಿ ಬೇಕರಿ, ಕ್ಯಾಂಟಿನ್, ಹೋಟೆಲ್ ನಡೆಸುವವರಿಗೆ ಬೆದರಿಕೆ, ಹಲ್ಲೆ ಮಾಡುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇದ್ದು, ಇಂದು ಮತ್ತೆ ಅಂತಹದ್ದೊಂದು ಪ್ರಕರಣ ಮರುಕಳಿಸಿದೆ. ಕ್ಯಾಂಡಿಮೆಟ್ಸ್ ಗಾಜು ಪುಡಿಗೊಳಿಸಿ ದಾಂದಲೆ ನಡೆಸಲಾಗಿದೆ.

ನಗರದ ನಾಗರಬಾವಿ ಸಮೀಪ ಮಾಳಗಾಳಾದಲ್ಲಿನ ಕುಂದಾಪುರ ಮೂಲದ ಸಹೋದರ ರಾಘುನಾಥ ಶೆಟ್ಟಿ ಹಾಗೂ ದಯಾನಂದ ಶೆಟ್ಟಿ ಎಂಬುವವರ ಮಧು ಕಾಂಡಿಮೆಂಟ್ಸ್’ಗೆ ಮಂಗಳವಾರ ಸಂಜೆ ಸಾಯಂಕಾಲ ಪ್ರಕಾಶ ಎನ್ನುವ ವ್ಯಕ್ತಿ ತೆರಳಿ 500ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಾನೆ. ಅಂಗಡಿ ಮಾಲಿಕ ಹಣ ನೀಡಲು ಸಾಧ್ಯವಿಲ್ಲ ಎಂದಾಗ ರಾತ್ರಿ ಹೊತ್ತು ಅವರ ಮನೆಗೆ ಬಂದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿರುತ್ತಾನೆ. ಪುನಃ ಬುಧವಾರ ಬೆಳಿಗ್ಗೆ ಬಂದು ಅಂಗಡಿ ಮಾಲಿಕನಿಗೆ ಬೆದರಿಕೆ ಹಾಕಿದ್ದಲ್ಲದೇ, ಕಾಂಡಿಮೆಂಟ್ಸ್ ಗ್ಲಾಸ್ ಒಡೆದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾನೆ.

ಅಂಗಡಿಗೆ ಬಂದು ಗಾಜು ಒಡೆದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಬಂಧಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಘಟನೆಯನ್ನು ಖಂಡಿಸಿ ಬೆಂಗಳೂರು ಬಂಟ್ಸ್ ಸೇವಾದಳದ ವತಿಯಿಂದ ಮಾ.1ರಮದ್ಯಾನ್ನ 3 ಗಂಟೆಗೆ ಕಾಂಡಿಮೆಂಟ್ಸ್ ಬಳಿ ಸೇರಿ ಪ್ರತಿಭಟನೆ ನಡೆಸಲಿರುವ ಬಗ್ಗೆ ಬಂಟ್ಸ್ ಸೇವಾದಳದ ಚೇರ್ ಪರ್ಸನ್ ಉಮೇಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ.

Exit mobile version