Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಅಷ್ಟಬಂಧ ಲೇಪನ, ಕಲಶ ಪ್ರತಿಷ್ಠೆ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪ್ರಕಾಶ ಉಡುಪ ಹಾಗೂ ಋತ್ವಿಜರಿಂದ ಬೆಳಿಗ್ಗೆ ೯-೦೨ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಪುನರ್ಪ್ರತಿಷ್ಠೆ, ಶ್ರೀಈಶ್ವರ ದೇವರ ಪುನರ್ಪ್ರತಿಷ್ಟೆ, ಅಷ್ಟಬಂಧ ಲೇಪನ, ಕಲಶ ಪ್ರತಿಷ್ಠೆ, ಜೀವನ್ಯಾಸಗಳು, ಪ್ರಾಣ ಪ್ರತಿಷ್ಠಾಪನೆ, ತತ್ವಹವನ, ಪೂರ್ಣ ಕಲಾಹವನ, ನಿರೀಕ್ಷಾ ಪೂಜೆ ವಿಜೃಂಭಣೆಯಿಂದ ನೆರವೇರಿತು.

ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗಾನಮಾಲಾ ಧ್ವನಿಸುರುಳಿಯನ್ನು ಶ್ರೀರಾಘವೇಶ್ವರ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀಗಳು, ಯಾವುದೇ ಧಾರ್ಮಿಕ ಪುಣ್ಯ ಕಾರ್ಯಗಳಲ್ಲಿ ಭಾಗ್ಯ ಇದ್ದವರು ಮಾತ್ರ ಭಾಗಿಯಾಗುತ್ತಾರೆ. ಎಲ್ಲರಿಗೂ ಈ ಸದಾವಕಾಶ ಸಿಗುವುದಿಲ್ಲ. ಇದಕ್ಕೆ ನಾವು ಕೂಡ ಹೊರತಾಗಿಲ್ಲ. ನಾವು ಈ ಸನ್ನಿಧಾನಕ್ಕೆ ಭೇಟಿನೀಡುವುದು ಪೂರ್ವ ನಿಗದಿತ ಕಾರ್ಯಕ್ರಮವಾಗಿರಲಿಲ್ಲಾ. ಆ ತಾಯಿಯ ಪ್ರೇರಣೆಯಿಂದ ಈ ಕ್ಷೇತ್ರಕ್ಕೆ ಬರುವ ಸುದೈವ ನಮ್ಮ ಪಾಲಿಗೆ ಒದಗಿಬಂತು. ತಾಯಿಯ ಸನ್ನಿಧಿಯ ಪ್ರಾಪ್ತಿ ಸುಲಭದ ಮಾತಲ್ಲ. ಈ ಕ್ಷಣದಲ್ಲಿ ನಿಸರ್ಗ ಸಹಜ ವಿಗ್ರಹದ ಪುನರ್ಪ್ರತಿಷ್ಠೆನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕವರೆಲ್ಲರ ಜೀವನ ಪಾವನವಾಗಿದೆ. ಇದು ಕೇವಲ ಗುಡಿಯಲ್ಲ. ೮೦೦ ಎಕರೆ ಭೂಮಿ ಹೊಂದಿದ ಮಹಾಪುಣ್ಯ ಕ್ಷೇತ್ರವಿದು. ಕೊಲ್ಲೂರು ಕ್ಷೇತ್ರದಂತೆ ಈ ಕ್ಷೇತ್ರವೂ ಕೂಡ ಮೊದಲಿನಂತೆ ಪರಮ ವೈಭವಕ್ಕೇರಬೇಕು. ಇತಿಹಾಸ ಮರುಕಳಿಸುವಂತಾಗಬೇಕು ಎಂದು ಹರಸಿದರು.

ಧ್ವನಿಸುರುಳಿಯ ಕಲಾವಿದರಾದ ಯು. ರಾಜೇಶ ಪಡಿಯಾರ್, ವಿಜಯಾ ಓಂ ಗಣೇಶ ಕಾಮತ್, ರಶ್ಮಿ ಚಿಕ್ಕಮಗಳೂರು, ಯು. ವಿನಾಯಕ ಪ್ರಭು, ಪದ್ಮಾವತಿ ಪಾಂಡುರಂಗ ಪಡಿಯಾರ್, ಜೇಷ್ಠಾ ಶ್ರೀನಿವಾಸ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ, ಶಮ್ಮಿ ಸುರೇಶ ಶೆಟ್ಟಿ ದಂಪತಿಗಳು, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಭೀಮಪ್ಪ ಎಚ್. ಬಿಲ್ಲಾರ್, ಋತ್ವಿಜರು, ಸಮಿತಿಯ ಸದಸ್ಯರಿಗೆ ಶ್ರೀಗಳು ಆಶೀರ್ವಚನ ಮಂತ್ರಾಕ್ಷತೆ ನೀಡಿದರು. ನಂತರ ಶ್ರೀಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಿ ಮುಂದಿನ ಮೊಕ್ಕಾಂಗೆ ಬೀಳ್ಗೊಡಲಾಯಿತು. ಮಾ.೦೬ರಂದು ನಡೆಯಲಿರುವ ಶ್ರೀ ಮನ್ಮಾರಥೋತ್ಸವಕ್ಕೆ ಮಧ್ಯಾಹ್ನ ಧ್ವಜಾರೋಹಣ ನೆರವೇರಿಸಲಾಯಿತು

ಇದನ್ನೂ ಓದಿ:
► ಫೆ.27ರಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ – https://kundapraa.com/?p=65237 .

.

Exit mobile version