ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಮಾ.6: ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಉಪ್ಪುಂದ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಮನ್ಮಹಾ ರಥೋತ್ಸವ ಸೋಮವಾರ ಸಕಲ ವಾದ್ಯಘೋಷಗಳೊಂದಿಗ ವಿಜಂಭೃಣೆಯಿಂದ ನಡೆಯಿತು.
ಸುಮಾರು 25ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ನಡೆದಿದ್ದು ದೇವಸ್ಥಾನವನ್ನು ಹೂವಿನ ಅಲಂಕಾರದಲ್ಲಿ ಶೃಂಗರಿಸಲಾಗಿತು. ಸಾವಿರಾರು ಭಕ್ತಾಧಿಗಳು ಆಗಮಿಸಿ ಅಮ್ಮನವರ ದರುಶನ ಪಡೆದು ಅನ್ನಪ್ರಸಾದ ಪಡೆದರು. ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು, ಭಕ್ತಾಧಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ಹಣ್ಣುಕಾಯಿ ಹಾಗೂ ವಿವಿಧ ಸೇವೆಗಳು ಪ್ರಾರಂಭಗೊಂಡಿತ್ತು.
ಬೆಳಗ್ಗೆ ಪರವಾರ ಗಣಗಳಾದ ಚಂಡಿಕಾಯೈ, ಅಂಬಿಕಾಯೈ, ಮಹಾಸಿಂಹಾಯ, ಗಣಪತಿ, ದಕ್ಷಿಣ ಮೂರ್ತಿ, ಇಂದ್ರ, ಅಗ್ನಿ, ಯಮ, ನಿರ್ಯತಿ, ವರುಣ, ವಾಯು, ಸೋಮ, ಈಶಾನ, ಬ್ರಹ್ಮ, ಅನಂತ, ವೀರಭದ್ರ, ವಿಘ್ನೇಶ, ಬ್ರಾಹ್ಮಿ, ಮಹೇಶ್ವರೀ, ಕೌಮಾರ್ಯೆ, ವೈಷ್ಣವಿ, ವರಾಹಿ, ಇಂದ್ರಾಣಿ, ಚಾಮುಂಡಿ, ಮಾತೃಭ್ಯೋ, ಲೋಕ ಮಾತೃಭ್ಯೋ, ಸರ್ವಮಾತೃಭ್ಯೋ, ಸರ್ವಮಾತೃಗಣೇಭ್ಯೋ, ಲಕ್ಷ್ಮೈ, ಭೂಚರ್ಯೆ, ಖೇಚರ್ಯ, ಶಾಸ್ತಾರ, ದುರ್ಗಾ, ಸ್ಕಂದ, ಧನಧಾಯಿ, ಮುಂಡಿನಿ, ಹಾದಿನ್ರಿ, ಮೋದಿನಿ, ವಿಜಯಮತಿ, ಕಾತ್ಯಾಯನಿ, ಕಾಳಿ, ಕರಾಳಿ, ವೀರಜೆ, ಮಂದಾರ, ವಿಂಧ್ಯಾವಾಸಿನಿ, ಸುಪ್ರಭಾ, ಸಿಂಹವಕ್ತ್ರೆ, ದೈತ್ಯಮಽನಿ, ಕ್ಷೇತ್ರಪಾಲ, ಬ್ರಹ್ಮಘೋಷಿನಿ, ಸಂಘ್ಯೋಪಿ, ಯಥೇಷ್ಯ್ಠೀ, ಸಖರಾಘಿಣಿ, ಸುಮುಖಿ, ಸುಭಗೆ, ಪ್ರಮೋದಿನಿ, ಆತ್ಮಿನೆ, ಬ್ರಾಹ್ಮಿ ಬಲಿ ದೇವತೆಗಳಿಗೆ ಹಾಗೂ ಗರ್ಭಗುಡಿ ಒಳಗಿನ ದೇವರುಗಳಿಗೆ ಪೂಜೆ ಆದಂತೆ ಆವರಣದೊಳಗೆ ಹಾಗೂ ಹೊರಗಿನ ಸಂಬಂಧಿತ ದ್ವಾರಪಾಲಕರು, ವಾಹನ, ನಿರ್ಮಾಲ್ಯ ಮೂರ್ತಿ, ಕ್ಷೇತ್ರಪಾಲ, ದಿಕ್ಪಾಲಕರು ಇನ್ನಿತರ ಗಣಗಳಿಗೆ ಆಯಾಯ ಸ್ಥಾನಗಳಲ್ಲಿ ಆಹ್ವಾನಿಸಿ, ಅರ್ಘ್ಯ, ಪಾದ್ಯ, ಪಾನೀಯ ಹಾಗೂ ನೈವೇದ್ಯ (ಬಲಿ) ನೀಡಲಾಯಿತು. ಈ ರೀತಿ ಸಪರಿವಾರ ಸರ್ವಾಲಂಕೃತ ದೇವರನ್ನು ತುಷ್ಠೀಕರಿಸಿದಾಗ ಸಾನ್ನಿಧ್ಯ ವೃದ್ಧಿಯಾಗಿ ದೇವಸ್ಥಾನದ ಶಕ್ತಿ ಹೆಚ್ಚಾಗುತ್ತದೆ ಹಾಗೂ ಪ್ರಾರ್ಥನೆಗಳು ಈಡೇರುತ್ತದೆ.