Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಕೊಚುವೆಲಿ – ಮುಂಬೈ ಗರೀಬ್‌ರಥ್ ರೈಲಿಗೆ ಸ್ವಾಗತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಾರದಲ್ಲಿ ಎರಡು ದಿನ ಸಂಚರಿಸುವ ಕೊಚುವೆಲಿ-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್-ಕೊಚುವಲಿ ಗರೀಬ್‌ರಥ್ ರೈಲಿಗೆ ಮಂಗಳವಾರ ಬೆಳಿಗ್ಗೆ ೬ಕ್ಕೆ ಮೂಕಾಂಬಿಕಾ ರೈಲು ನಿಲ್ದಾಣ ಬೈಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಈ ರೈಲು ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ವಿಶೇಷ ಮುತುವರ್ಜಿವಹಿಸಿದ್ದರು. ಸಂಸದರ ಮನವಿ ಮೆರೆಗೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತ್ತು. ಇದು ಈ ಭಾಗದ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಿದೆ. ಮುಂಬೈ, ಶಬರಿಮಲೈಗೆ ಹೋಗುವ ಯಾತ್ರಾರ್ಥಿಗಳಿಗೆ ಈ ರೈಲು ಸೇವೆಯಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಪ್ರತಿಕ್ರೀಯಿಸಿದ ಮೂಕಾಂಬಿಕಾ ಯಾತ್ರಿ ಸಂಘದ ಗೌರವಾಧ್ಯಕ್ಷ ಕುಂಜಾಲು ವೆಂಕಟೇಶ ಕಿಣಿ, ಸಂಸದರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಉಪಾಧ್ಯಕ್ಷ ಯು. ಉದಯಶಂಕರ್ ಪಡಿಯಾರ್, ಕಾರ್ಯದರ್ಶಿ ಪ್ರಕಾಶ ಪೂಜಾರಿ ಹಾಗೂ ನಿಲ್ದಾಣದ ಟ್ಯಾಕ್ಸಿ, ಆಟೋರಿಕ್ಷಾ ಚಾಲಕ- ಮಾಲಕ ಸಂಘದ ಪದಾಧಿಕಾರಿಗಳು, ಸದಸ್ಯರು, ನಿಲ್ದಾಣದ ಸಿಬ್ಬಂದಿಗಳು ಇದ್ದರು.

Exit mobile version