ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಎಂಬ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ ಸ್ನೇಹಾ ದಾಮ್ಲೆ ಮಾತನಾಡಿ ಜಗತ್ತಿಗೆ ಜೀವನ ಪಾಠವನ್ನು ತಿಳಿಸಿದ ದೇಶ ನಮ್ಮ ಭಾರತ. ನಮ್ಮ ದೇಶವನ್ನು ನಾವು ಅರಿಯಬೇಕು. ಪ್ರತಿಯೊಂದು ವಸ್ತುವಿನ ಯಾರಲ್ಲಿ ದೈವಿಕತೆಯನ್ನು ಕಾಣುವುದು ಭಾರತದ ಸಂಸ್ಕೃತಿ. ಹಾಗಾಗಿ ನಮ್ಮ ದೇಶವನ್ನು ಅರಿಯುವ ಪ್ರಯತ್ನ ಮಾಡಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಸುವ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು
ಇನ್ನೊಬ್ಬ ಅತಿಥಿ ಮಾನ್ವಿತಾ ಡಿ. ಮಾಸ್ಗೊಡೆ ಮಾತನಾಡಿ ಬದುಕಿನಲ್ಲಿ ಬರುವಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುರಾಜ್ ರಾವ್, ಪ್ರಭೋಧನ ಸಂಚಾಲಕರು, ಮಂಗಳೂರು ವಿಭಾಗ, ಆಪ್ತ ಸಮಾಲೋಚಕಿ ಸ್ವರ್ಣ ಕುಂದಾಪುರ, ಶೀತಲ್, ಉಪನ್ಯಾಸಕಿ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಪ್ರೊ ಸತ್ಯನಾರಾಯಣ, ಸಂಯೋಜಕರು, ಯುಥ್ ರೆಡ್ ಕ್ರಾಸ್, ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿರಿ ಕಾರ್ಯಕ್ರಮ ನಿರ್ವಹಿಸಿ, ಚಿನ್ಮಯಿ ಹೆಬ್ಬಾರ್ ಸ್ವಾಗತಿಸಿ, ಸುನಿಧಿ ಹೆಬ್ಬಾರ್ ಮತ್ತು ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿ, ರಮ್ಯಾ ವಂದಿಸಿದರು.