Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರೋಟರಿ ನರ್ಸರಿ ಸ್ಕೂಲ್ ಡೇ – ಚಿನ್ನರ ಚಿಲಿಪಿಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಕುಂದಾಪುರ ಆಯೋಜಿಸಿದ ರೋಟರಿ ನರ್ಸರಿ ಸ್ಕೂಲ್ ಡೇ ಸೆಲೆಬ್ರೇಶನ್ ಚಿನ್ನರ ಚಿಲಿಪಿಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಆಶಾ ಪ್ರಶಾಂತ್ ತೋಳಾರ್ ಮಕ್ಕಳಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು ಹಾಗೆ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶಾಲಾ ಕಮಿಟಿಯ ವ್ಯವಸ್ಥಾಪಕರಾದ ರಾಘವೇಂದ್ರ ಚರಣ್ ನಾವಡ ಶಾಲೆಯ ಬಗ್ಗೆ ವಿವರಣೆಯನ್ನು ನೀಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವಂದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪಾರ್ವತಿ ಪ್ರಾರ್ಥನೆಯನ್ನು ಮಾಡಿ ಸ್ವಾಗತಿಸಿದರು. ಜೋಯ್ನಾ ನಿರೂಪಣೆಯನ್ನು ಮಾಡಿದರು. ರೋಟರಿ ಕುಂದಾಪುರದ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಧನ್ಯವಾದಗೈದರು.

Exit mobile version