Site icon Kundapra.com ಕುಂದಾಪ್ರ ಡಾಟ್ ಕಾಂ

ಜಾತಿ ಮತ ಧರ್ಮ ಮರೆತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಜನರು ಜಾತಿ ಮತ ಧರ್ಮ ಮರೆತು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಪಕ್ಷೇತರವಾಗಿ ನಿಂತಾಗಲೂ ಭಾವನೆಗೆ ಸ್ಪಂದಿಸಿ ಅಭೂತಪೂರ್ವ ಜಯ ಸಿಕ್ಕಿತು. ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ನಿಂತಾಗ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

Watch Video

ಅವರು ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ದುಡುಕಿನ ನಿರ್ಧಾರ ತೆಗೆದಕೊಂಡಿಲ್ಲ ಮನಸ್ಸು ಚಂಚಲವಾಗಿಲ್ಲ. ಜಾಗೃತ ಮನಸ್ಸಿನಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಲು ಹೇಳಿದ್ರು ಮಾತನಾಡಿದೆ. ಕಿರಣ್ ಕೊಡ್ಗಿ ನನ್ನ ತಮ್ಮನ ಆಪ್ತ, ತಂದೆಯ ಕಾಲದಿಂದ ಕುಟುಂಬದ ಆಪ್ತರು. ಅವರಿಗೆ ಅವಕಾಶ ಕೊಟ್ಟರೆ ನಾನು ಖುಷಿ ಪಡುತ್ತೇನೆ. ಆದರೆ ಅಭ್ಯರ್ಥಿ ಯಾರೆಂದು ರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ಆಗಬೇಕು. ಯಾರೇ ಬಿಜೆಪಿಯ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತೇನೆ, ಪ್ರಕಟಣೆಯಲ್ಲೂ ದಾಖಲಿಸಿದ್ದೇನೆ ಎಂದರು.

ಕುಂದಾಪುರ ವನ್ನು ಸಿಂಗಾಪುರ ಮಾಡಿ ಎಂದು ಹೇಳೂದಿಲ್ಲ. ಮುಂದಿನ ಶಾಸಕ ಕ್ಷೇತ್ರದ ಸಮಸ್ಯೆ, ಸಾಮಾಜಿಕ ಅಸಮಾನತೆ ಹೋಗಲಾಡಿಸಲಿ. ಸಾಮಾಜಿಕ ನ್ಯಾಯಕ್ಕೆ ಅನುಸಾರವಾಗಿ ಶಾಸಕರು ಕೆಲಸ ಮಾಡಲಿ ಎಂದರು.

ಶಾಸಕನಾಗಿ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟ ಬಿಜೆಪಿ ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ನಡುವೆ ಒಂದು ಕೂದಲೆಳೆ ವೈಮನಸ್ಸು ಇಲ್ಲ. ನಾನು ಆರು ತಿಂಗಳ ಹಿಂದೆಯೇ ಚುನಾವಣೆ ನಿಲ್ಲದಿರುವ ನಿರ್ಧಾರ ಮಾಡಿದ್ದೆ ನೀತಿ ಸಂಹಿತೆ ಜಾರಿಯ ದಿನದ ತನಕ ಕೆಲಸ ಮಾಡಿದ್ದೇನೆ. ವಿಶ್ರಾಂತಿ ಎಂಬೂದು ನಿಷ್ಕ್ರಿಯತೆ ನಾನು ವಿಶ್ರಾಂತಿ ತೆಗೆದುಕೊಳ್ಳಲ್ಲ. ಕೊನೆಯ ಉಸಿರುರುವವರೆಗೆ ನಾನು ಆಕ್ಟಿವ್ ಆಗಿರುತ್ತೇನೆ. ಶಾಸಕನಲ್ಲದಿದ್ದರೂ ಜನಗಳ ಜೊತೆ ಹೃದಯಪೂರ್ವಕವಾಗಿ ಇರುತ್ತೇನೆ ಎಂದು ಅವರು ಭಾವುಕರಾಗಿ ನುಡಿದರು.

Exit mobile version