Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು: ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕಳವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಶಿರೂರು ಮಾರ್ಕೆಟ್ ಬಳಿ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದೊಯ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕೃತ್ಯದಲ್ಲಿ 18 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 12 ಲಕ್ಷ ರೂ. ನಗದು ಕದ್ದೊಯ್ಯಲಾಗಿರುವ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರೂರು ಮಾರ್ಕೆಟ್ ಬಳಿ ಹಾರ್ಡ್ವೇರ್ ಉದ್ಯಮ ನಡೆಸುತ್ತಿರುವ ಮಹಮ್ಮದ್ ಅಜೀಮ್ ಎನ್ನುವವರು ಸಂಜೆ ಪತ್ನಿ ಮನೆಗೆ ತೆರಳಿ ಮರಳುವ ವೇಳೆ ಗ್ರಾಹಕರಿಂದ ಪಡೆದಿದ್ದ ನಗದನ್ನು ಮನೆಯಲ್ಲಿ ಇರಿಸಿ ಮತ್ತೆ ಊಟಕ್ಕೆಂದು ತೆರಳಿದ್ದರು. ಮರಳಿ ಮನೆಗೆ ಬಂದು ನೋಡಿದಾಗ ಚಿನ್ನ ಹಾಗೂ ಹಣ ಕಳವುಗೈದಿರುವುದು ಬೆಳಕಿಗೆ ಬಂದಿದೆ. ಹಾರ್ಡ್ವೇರ್ ವ್ಯವಹಾರದಿಂದ ಬಂದ ಹಣವನ್ನು 2-3 ದಿನಗಳಿಗೊಮ್ಮೆ ಬ್ಯಾಂಕಿಗೆ ಹಾಕುತ್ತಿದ್ದರಿಂದ ಮನೆಯಲ್ಲಿಯೇ ಎಲ್ಲಾ ಹಣವನ್ನೂ ಇರಿಸಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ತನಿಕೆ ನಡೆಸುತ್ತಿದ್ದಾರೆ.

Exit mobile version