Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ಮಿಸ್. ಅಭಿಮಾನಿಗಳ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಈ ಭಾರಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ.

Watch Video

ಪಕ್ಷದ ವರಿಷ್ಠರು ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ಪೋನ್ ಮೂಲಕ ಸಂಪರ್ಕಿಸಿದ್ದು, ಈ ಭಾರಿ ತಮಗೆ ಟಿಕೆಟ್ ನೀಡಲಾಗುತ್ತಿಲ್ಲ. ಹೊಸ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಸುಕುಮಾರ ಶೆಟ್ಟಿ ಅವರು ಟಿಕೆಟ್ ವಂಚಿತರಾಗಿರುವ ವಿಚಾರ ತಿಳಿಯುತ್ತಿದ್ದಂತೆ ಸುಕುಮಾರ ಶೆಟ್ಟಿ ಅವರ ನಿವಾಸಕ್ಕೆ ಅವರ ಅಭಿಮಾನಿಗಳು ತೆರಳಿ ಬಿಜೆಪಿ ಪಕ್ಷದ ವರಿಷ್ಠರ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬೈಂದೂರು ಬಿಜೆಪಿ ಪಕ್ಷದ ಪ್ರಮುಖರ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಬೈಂದೂರು ಬಿಜೆಪಿಯಿಂದ ಎರಡು ಅವಧಿಗೆ ಸ್ಪರ್ಧಿಸಿದ್ದ ಸುಕುಮಾರ ಶೆಟ್ಟಿ ಅವರು ಒಂದು ಭಾರಿ ಸೋತು, ಎರಡನೇ ದೊಡ್ಡ ಅಂತರದಿಂದಲೇ ಗೆಲುವ ಸಾಧಿಸಿದ್ದರು.

ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಕಾರ್ಯಗಳು ನಡೆದಿದ್ದವು. ಸುಕುಮಾರ ಶೆಟ್ಟು ಪಕ್ಷದ ಕಾರ್ಯಕರ್ತರೊಂದಿಗೆ ಹೊಂದಿದ್ದ ಸಂಘರ್ಷ ಹಾಗೂ ಆರ್.ಎಸ್.ಎಸ್ ಪ್ರಮುಖರೊಂದಿಗೆ ಅವರು ಕಾಯ್ದುಕೊಂಡ ಅಂತರವೇ ಅವರಿಗೆ ಟಿಕೆಟ್ ನಿರಾಕರಿಸಲು ಪ್ರಮುಖ ಕಾರಣ ಎನ್ನಲಾಗಿದೆ.

Exit mobile version