ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಶನಿವಾರ ಬೆಳಗ್ಗೆ ಹಾಲಾಡಿಯವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದು, ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಪಕ್ಷದ ಹಿರಿಯ ನಾಯಕರು, ಪ್ರಮುಖರು ನನಗೆ ಬೈಂದೂರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದು ನನ್ನ ಕರ್ತವ್ಯವೂ ಹೌದು. ಯುವ ನಾಯಕ ಗುರುರಾಜ್ ಅವರಿಗೆ ನಿಮ್ಮೆಲ್ಲರ ಬೆಂಬಲ, ಸಹಕಾರ ಬೇಕಾಗಿದೆ. ನಾನು ಕೂಡ ಬೈಂದೂರು ಭಾಗದಲ್ಲಿ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.
ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನಮಗೆಲ್ಲ ಆದರ್ಶಪ್ರಾಯರು. ಅವರ ಆರ್ಶಿವಾದವನ್ನು ಪಡೆದಿದ್ದೇನೆ. ಅವರ ಬೆಂಬಲ, ಸಹಕಾರವಿಂದು ಸಿಕ್ಕಿದೆ. ಈಗ ನನಗೆ ಧೈರ್ಯ ಬಂದಿದೆ. ಅವರ ಸಾಮಾಜಿಕ ಕೈಂಕರ್ಯ ನಮಗೆಲ್ಲ ಮಾದರಿ ಎಂದರು. ಇದೇ ವೇಳೆ ಬೈಂದೂರು ಸುಕುಮಾರ ಶೆಟ್ಟಿ ಅವರೂ ಬೆಂಬಲ ನೀಡಿರುವುದಾಗ ಸ್ಪಷ್ಟಪಡಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಶನಿವಾರ ಬೆಳಗ್ಗೆ ಹಾಲಾಡಿಯವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದು, ಸಹಕಾರ ಕೋರಿದರು.