Kundapra.com ಕುಂದಾಪ್ರ ಡಾಟ್ ಕಾಂ

ಕೆ. ಗೋಪಾಲ ಪೂಜಾರಿ: 4 ಭಾರಿ ಶಾಸಕರಾದ್ರೂ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಾಲ್ಕು ಭಾರಿ ಶಾಸಕ, ಒಮ್ಮೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಆದರೂ ಈ ಸುಧೀರ್ಘ ರಾಜಕೀಯ ಬದುಕಿನಲ್ಲಿ ಬೈಂದೂರಿನ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು!

ಸಾಮಾನ್ಯ ಹೋಟೆಲ್ ಕಾರ್ಮಿಕನಾಗಿ ವೃತ್ತಿ ಬದುಕು ಆರಂಭಿಸಿದ ಗೋಪಾಲ ಪೂಜಾರಿ ಅವರು ಮುಂದೆ ಹತ್ತಾರು ಹೋಟೆಲ್‌ಗಳ ಒಡೆಯರಾಗಿದ್ದವರು. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪ್ರಭಾವವು ಅವರನ್ನು ರಾಜಕೀಯದತ್ತ ಸೆಳೆಯಿತು. ಒಟ್ಟು ಏಳು ಭಾರಿ ಸ್ವರ್ಧಿಸಿ ನಾಲ್ಕು ಭಾರಿ‌ ವಿಜಯದ ಮಾಲೆ ತೊಟ್ಟರು. ಆದರೆ ಪ್ರತಿ ಸೋಲು‌ – ಗೆಲುವಿನ ನಡುವೆಯೂ ಅವರ ಆಸ್ತಿ ಮೌಲ್ಯ ಕ್ಷೀಣಿಸುತ್ತಲೇ ಬಂದಿದೆ. 2013ರಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ 13 ಕೋಟಿಗಳಷ್ಟಿದ್ದರೆ, 2018ಕ್ಕೆ ಅದು 8 ಕೋಟಿ ಇಳಿದಿತ್ತು. 2023ರಲ್ಲಿ ಕೇವಲ 1.35 ಕೋಟಿ ಮೌಲ್ಯದ ಒಟ್ಟು ಆಸ್ತಿ ಉಳಿದಿದೆ. ಒಂದೊಂದು‌ ಭಾರಿ ಸ್ವರ್ಧಿಸಿದಾಗಲೂ ಒಂದೊಂದು ಹೋಟೆಲ್ ಕಳೆದುಕೊಂಡಿದ್ದಾರೆ ಎಂಬ ಮಾತನ್ನು ಕ್ಷೇತ್ರದ ಜನರೇ ಹೇಳುತ್ತಾರೆ.

ಗೋಪಾಲ ಪೂಜಾರಿ ಅವರ 2023ರ ಆಸ್ತಿ ವಿವರ:
ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರ ಹೆಸರಲ್ಲಿ 70.23 ಲಕ್ಷ ರೂ. ಚರಾಸ್ತಿಯಿದ್ದು, ಸ್ಥಿರಾಸ್ತಿಯಿಲ್ಲ. 7.80 ಲಕ್ಷ ರೂ ನಗದು, ಬ್ಯಾಂಕ್‌ಗಳಲ್ಲಿ 45.23 ಲಕ್ಷ ರೂ. ಸಾಲವಿದೆ. ಪತ್ನಿ ಮಮತಾ ಜಿ. ಪೂಜಾರಿ ಹೆಸರಲ್ಲಿ 46.67 ಲಕ್ಷ ರೂ. ಚರಾಸ್ತಿ 85 ಲಕ್ಷರೂ. ಮೌಲ್ಯದ ಸ್ಥಿರಾಸ್ತಿಯಿದೆ. 1.15 ಲಕ್ಷ ರೂ. ನಗದು ಇದ್ದು, 35 ಲಕ್ಷ ರೂ. ಸಾಲವಿದೆ. ಪುತ್ರರಾದ ಸೂರಜ್, ಪವನ್ ಹಾಗೂ ಪತ್ರಿ ಕೀರ್ತಿ ಅವರ ಹೆಸರಲ್ಲಿ ಆಸ್ತಿ ಇದೆ. ಅವರ ಬಳಿ 6.37 ಲಕ್ಷ ರೂ.ಗಳ ಫೋರ್ಡ್, 30.47 ಲಕ್ಷರೂ.ಗಳ ಇನ್ನೋವಾ ಕ್ರಿಸ್ಟಕಾರಿದ್ದು, 6 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ ಪತ್ನಿಯ ಬಳಿ 45 ಲಕ್ಷರೂ. ಮೌಲ್ಯದ 750 ಗ್ರಾಂ ಚಿನ್ನವಿದೆ. 18 ಲಕ್ಷರೂ. ವಿಮೆ, ಸೊಸೈಟಿಯಲ್ಲಿ 50 ಸಾವಿರ ರೂ. ಹೂಡಿಕೆ, ಬ್ಯಾಂಕ್ ಗಳಲ್ಲಿ 78,755 ರೂ. ಠೇವಣಿಯಿದೆ. ಪತ್ನಿ ಹೆಸರಲ್ಲಿ ಪೆರಂಪಳ್ಳಿ ಶಿವಳ್ಳಿ 85 ಲಕ್ಷ ರೂ. ಮೌಲ್ಯದ 0.82 ಎಕರೆ ಆಸ್ತಿಯಿದೆ .

ಇದನ್ನೂ ಓದಿ: ► ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಆಸ್ತಿ ಎಷ್ಟು ಗೊತ್ತಾ? – https://kundapraa.com/?p=66203 .

Exit mobile version