ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ವಕ್ವಾಡಿ ಗುರುಕುಲ ಪದವಿಪೂರ್ವ ಕಾಲೇಜು ಶೈಕ್ಷಣಿಕ ವರ್ಷ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುತ್ತದೆ.
ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.48.14 ಉನ್ನತ ಶ್ರೇಣಿಯಲ್ಲಿ, ಶೇ.51.85 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.41.66 ವಾಣಿಜ್ಯ ವಿಭಾಗದಲ್ಲಿ 53.33 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅನನ್ಯ ಆರ್. ಶೆಟ್ಟಿ (578), ದೀಕ್ಷಾ ಎಚ್. ಶೆಟ್ಟಿ(576), ಶ್ರೇಯಾ ಜೆ. ಹೆಗ್ಡೆ (568), ಶ್ರಾವ್ಯಾ ಶೆಟ್ಟಿ(565), ವಿ.ಆರ್.ಭುವನ ಗೌಡ(546), ಶ್ರೇಯಸ್ ಶೆಟ್ಟಿ(535),ತನ್ವಿ ಜಿ. ಶೆಟ್ಟಿ(523), ಶ್ರೀರಕ್ಷಾ ಕೆ.ಎ(516) ಹಾಗೂ ವಿಜ್ಞಾನ ವಿಭಾಗದಲ್ಲಿ ಸಾನಿಯಾ ಶೇಖ್ (562), ದಿಶಾ ಎಚ್. ಶೆಟ್ಟಿ(538), ಭವಿಷ್ ಎಸ್. ಶೆಟ್ಟಿ(535), ವರ್ಷಿತ್ ಎಮ್(529), ಬಸವರಾಜ್ ಮಠದ್(521) ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿರುತ್ತಾರೆ.