Kundapra.com ಕುಂದಾಪ್ರ ಡಾಟ್ ಕಾಂ

ಪಿಯುಸಿ ಫಲಿತಾಂಶ: ಭಂಡಾರ್ಕಾರ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾಕಾರ‍್ಸ್ ಪದವಿ ಪೂರ್ವ ಕಾಲೇಜು 2022-23ನೇ ಶೈಕ್ಷಣಿಕ ವರ್ಷದ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 97% ಫಲಿತಾಂಶ ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಪ್ರಾಂಜಲ್ ಮ್ಯಾಥ್ಯೂ ಲೋಬೋ (96.16%), ಶುಭಶ್ರೀ (95.5%), ದಿಶಾ.ಜೆ.ಶೆಟ್ಟಿ (93.33%) ಅತ್ಯತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಶಮಿ(97.66%), ನಿಶ್ಮಿತಾ(96), ಪ್ರಣಮ್ಯ ಛಾತ್ರ(95.5%) ಅತ್ಯತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿಶೇಷ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Exit mobile version