Kundapra.com ಕುಂದಾಪ್ರ ಡಾಟ್ ಕಾಂ

ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: 47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಸೃಷ್ಟಿಸಿದ್ದು, ಕಾಲೇಜಿನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ಅನನ್ಯಾ ಕೆ. ಎ. 600ಕ್ಕೆ 600 ಅಂಕ ಪಡೆದಿದ್ದಾಳೆ.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ‘ಪಿಯುಸಿ ಇತಿಹಾಸದಲ್ಲಿ (ಕೋವಿಡೇತರ) ವಿದ್ಯಾರ್ಥಿಯೊಬ್ಬರು ಪೂರ್ಣಾಂಕ (ಶೇ100) ಪಡೆದಿರುವುದು ಸಾರ್ವಕಾಲಿಕ ಹಾಗೂ ಶಾಶ್ವತ ದಾಖಲೆಯಾಗಿದೆ’ ಎಂದರು.

ಆಳ್ವಾಸ್ ಪದವಿ ಪೂರ್ವ ಕಾಲೇಜು 99.74% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 2658 ವಿದ್ಯಾರ್ಥಿಗಳಲ್ಲಿ 2651 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ವಿಜ್ಞಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಕಾಲೇಜಿನ ಒಟ್ಟು 47 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರ ಒಳಗೆ ಸ್ಥಾನಗಳನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದ್ದಾರೆ ಎಂದರು.

ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಕೆ.ಎ. 600 ಅಂಕಗಳೊAದಿಗೆ ಪ್ರಥಮ ಹಾಗೂ ದಿಶಾ ರಾವ್ 596 ಅಂಕಗಳೊAದಿಗೆ 2ನೇ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಪ್ರಚಿತಾ ಎಂ. 594 ಅಂಕಗಳೊAದಿಗೆ ರಾಜ್ಯದಲ್ಲಿ ತೃತೀಯ ಹಾಗೂ ಕಲಾ ವಿಭಾಗದಲ್ಲಿ ಚೈತನ್ಯಾ ಗಣಪತಿ ಹೆಗಡೆ 589 ಅಂಕಗಳೊAದಿಗೆ ರಾಜ್ಯದಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ.

ಓರ್ವ ವಿದ್ಯಾರ್ಥಿನಿ 100%, 23 ವಿದ್ಯಾರ್ಥಿಗಳು 98.33%ಕ್ಕೂ ಅಧಿಕ, 39 ವಿದ್ಯಾರ್ಥಿಗಳು 98%ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು, 338 ವಿದ್ಯಾರ್ಥಿಗಳು 95% ಕ್ಕಿಂತಲೂ ಅಧಿಕ, 1181 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 1910 ವಿದ್ಯಾರ್ಥಿಗಳು 85% ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ.

ಇಂಗ್ಲೀಷ್ ವಿಷಯದಲ್ಲಿ ಓರ್ವ ವಿದ್ಯಾರ್ಥಿನಿ, ಕನ್ನಡ ವಿಷಯದಲ್ಲಿ 3, ಹಿಂದಿಯಲ್ಲಿ 1, ಸಂಸ್ಕೃತದಲ್ಲಿ 32, ಬೌತಶಾಸ್ತ್ರದಲ್ಲಿ 36, ರಸಾಯನ ಶಾಸ್ತ್ರದಲ್ಲಿ 3, ಗಣಿತದಲ್ಲಿ 98, ಜೀವಶಾಸ್ತ್ರದಲ್ಲಿ 76, ಗಣಕ ವಿಜ್ಞಾನದಲ್ಲಿ 75, ಸಂಖ್ಯಾಶಾಸ್ತ್ರದಲ್ಲಿ 28, ಇಲೆಕ್ಟ್ರಾನಿಕ್ಸ್ ನಲ್ಲಿ 4, ಅರ್ಥಶಾಸ್ತ್ರದಲ್ಲಿ 72, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 54, ಅಕೌಂಟೆನ್ಸಿ ಯಲ್ಲಿ 88, ಇತಿಹಾಸದಲ್ಲಿ 1, ಬೇಸಿಕ್ ಮ್ಯಾತ್ಸ್ ನಲ್ಲಿ 42, ಸಮಾಜಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪೂರಕ ವಾತಾವರಣವಿದ್ದು, ಕಲಿಕೆಯೊಂದಿಗೆ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ. – ಡಾ. ಎಂ. ಮೋಹನ್ ಆಳ್ವ

Exit mobile version