Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಅಪರಿಚಿತ ವಾಹನ ಢಿಕ್ಕಿ: ಪಾದಾಚಾರಿ ಸಾವು

ಬೈಂದೂರು: ಇಲ್ಲಿನ ಶಿವದರ್ಶನ್ ಹೋಟೆಲ್‌ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಸುಕಿನ 5:30ರ ಸಮಾರಿಗೆ ನಡೆದಿದೆ. ಬಾದಾಮಿ ಜಿಲ್ಲೆಯ ಗುಳೆದಗುಡ್ಡದ ನಿವಾಸಿ ಆಸಂಗಿ (24) ಮೃತಪಟ್ಟ ದುದೈವಿ.

ಆಸಂಗಿ ಮಣಿಪಾಲದಲ್ಲಿ ಕೂಲಿ ಕೆಲಸ ಮಾಡಿಕೊಂಡು ದ್ವೀತೀಯ ವರ್ಷದ ಡಿಪ್ಲೋಮೊ ಓದುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಊರಿಗೆ ತೆರಳಿ ಅಲ್ಲಿಂದ ಬಸ್ಸಿನಲ್ಲಿ ಮಣಿಪಾಲಕ್ಕೆ ಹಿಂತಿರುಗುತ್ತಿದ್ದರು. ಮಾರ್ಗಮಧ್ಯೆ ಕಾಫಿ ಕುಡಿಯಲೆಂದು ಬಸ್ಸು ಶಿವದರ್ಶನ್ ಹೋಟೆಲ್‌ ಬಳಿ ನಿಲ್ಲಿಸಿತ್ತು. ಈ ಸಂದರ್ಭದಲ್ಲಿ ಆಸಂಗಿ ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿರುವಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ)

ವಾಹನ ವ್ಯಕ್ತಿಯ ದೇಹದ ಮೇಲೆ ಹರಿದಿದ್ದರಿಂದ ಆತನ ದೇಹ ಛಿದ್ರಗೊಂಡಿತ್ತು. ಢಿಕ್ಕಿ ಹೊಡೆದ ವಾಹನ ಇನ್ನೂ ಪತ್ತೆಯಾಗಿಲ್ಲ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ಸಂತೋಷ್ ಎ.ಕಾಯ್ಕಿಣಿ ತಂಡ ವಾಹನ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version