Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಮಾನ್ಯ ಕಾರ್ಯಕರ್ತನನ್ನು ಶಾಸಕನನ್ನಾಗಿಸುವ ಜವಾಬ್ದಾರಿ ನಿಮ್ಮದು – ಮಹಾರಾಷ್ಟ್ರ ಪರಿಷತ್ ಸದಸ್ಯ ಪ್ರವೀಣ್ ದಾರೇಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲು ಸಂಘಟಿತರಾಗಿ ಕೆಲಸ ಮಾಡಬೇಕು. ಸಾಮಾನ್ಯ ಕಾರ್ಯಕರ್ತನು ಶಾಸಕನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮೆಲ್ಲರದ್ದೂ ಆಗಿದೆ ಮಹಾರಾಷ್ಟ್ರ ರಾಜ್ಯದ ವಿಧಾನಪರಿಷತ್ ಸದಸ್ಯ ಪ್ರವೀಣ್ ದಾರೇಕರ್ ಹೇಳಿದರು.

https://youtu.be/A9TsETQsw_c

ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಭಾರತ ಗುರುತಿಸಿಕೊಳ್ಳುವಂತಾಗಿದೆ. ದೇಶದಲ್ಲಿ ಜನಸಾಮಾನ್ಯರು ಸೇರಿದಂತೆ ನಾಗರೀಕರಿಗೆ ಯೋಗ್ಯವಾದ ನೂರಾರು ಯೋಜನೆಗಳು ಜಾರಿಗೆ ತಂದಿದೆ. ಅಭಿವೃದ್ದಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ಬಿಜೆಪಿ ಮಂಡಲದ ಉಪಾಧ್ಯಕ್ಷ ಗಣೇಶ ಗಾಣಿಗ ಹಾಜರಿದ್ದರು.

Exit mobile version