Kundapra.com ಕುಂದಾಪ್ರ ಡಾಟ್ ಕಾಂ

ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್: ಎಸ್.ಎಸ್.ಎಲ್.ಸಿಯಲ್ಲಿ ಶೇ100 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದಿದ್ದಾರೆ.

35 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಕ್ಷಿತಾ 620 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ರ್ಯಾಂಕ್ (RANK) ಹಾಗೂ ತಾಲೂಕು ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿರುತ್ತಾರೆ.

ರಕ್ಷಾ 612, ಅಮೋದ್ 603, ಇಂಚರಾ 603, ಸೌಪೂರ್ಣಿಕ 602, ಗಾನವಿ 601, ಆರ್ಯ ಹಾಲಂಬಿ 592, ಮಯೂರ್ ಜಿ 589, ಸನ್ನಿಧಿ 586, ಪ್ರಜ್ವಲ್ 569, ಆಶಿಕ್ 563, ಫಾಹಿಮಾ ಜೈನಬಾ 560, ಸಾತ್ವಿಕ್ 559, ಯೂಶಾ 558, ಸದಾಶಿವ 557, ಸಾರಿಯಾ 556, ರಜತ್ 552, ಶಿವಶಂಕರ್ 548, ಸಮೀಕ್ಷಾ 546, ಅನನ್ಯ 544, ಪ್ರಥ್ವಿರಾಜ್ 543, ಸುಕೀರ್ತಿ 533, ಶಮನ್ 532.. ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಯವರು ಅಭಿನಂದಿಸಿದ್ದಾರೆ.

► ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ವಿದ್ಯಾರ್ಥಿನಿ ಅಕ್ಷಿತಾಗೆ ಎಸ್.ಎಸ್.ಎಲ್.ಸಿಯಲ್ಲಿ 6ನೇ ರ್ಯಾಂಕ್ – https://kundapraa.com/?p=66612 .

Exit mobile version