Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಶ್ರೀಲಹರಿ ರಾಜ್ಯಕ್ಕೆ ದ್ವಿತೀಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲಾ ಮಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀಲಹರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈಕೆ ಹೆಮ್ಮಾಡಿ ಶ್ರೀಧರ ದೇವಾಡಿಗ ಹಾಗೂ ಲಲಿತಾ ದಂಪತಿಯ ಕಿರಿಯ ಪುತ್ರಿ.

ಎಸ್ಸೆಸ್ಎಲ್ಸಿ ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚಿನ ಅಂಕದ ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಗಿಂತ ಹೆಚ್ಚಿನ ಅಂಕ ಬಂದಿರುವುದು ಖುಷಿ ತಂದಿದ್ದು, ಇನ್ನೂ ಹೆಚ್ಚಿನ ಸಾಧನಗೆ ಪ್ರೇರಣೆ ನೀಡಿದೆ. ಮುಂದೆ ಪಿಸಿಎಂಬಿ ತೆಗೆದುಕೊಂಡು ವೈದ್ಯಳಾಗಬೇಕು ಎನ್ನುವು ಕನಸಿದೆ. ಡ್ರಾಯಿಂಗ್, ಓದು, ಸಾಹಿತ್ಯ ಡಾನ್ಸ್ ಇತರೆ ಹವ್ಯಾಸಗಳಾಗಿದ್ದು, ಮನೆಯಲ್ಲಿ ಪೋಷಕರ ಪ್ರೋತ್ಸಾಹ, ಶಾಲಾ ಶಿಕ್ಷಕರ ಮಾರ್ಗದರ್ಶನ ಯಶಸ್ಸಿನ ಹಿಂದಿದೆ. ಯಾವುದೇ ಟೂಶನ್ಗೆ ಹೋಗದೆ ಅಂದಿನ ಪಾಠ ಅಂದೇ ಓದುವ ಜೊತೆ ಬೆಳಗ್ಗೆ ಹಾಗೂ ಸಂಜೆ ನಿಯಮಿತ ಓದು ಎಸ್ಸೆಸ್ಎಲ್ಸಿಯಲ್ಲಿ 624 ಅಂಕ ಪಡೆಯಲು ಕಾರಣ ಎಂದು ಶ್ರೀಲಹರಿ ತಿಳಿಸಿದ್ದಾಳೆ.

ಮಗಳ ಓದಿಗೆ ಬೆಂಬಲವಾಗಿ ಇದ್ದರೂ ಇಷ್ಟೇ ಅಂಕಪಡೆಯಬೇಕು. ಹೀಗೆ ಓದಬೇಕು ಅಂತ ಮಗಳ ಮೇಲೆ ಒತ್ತಡ ಹಾಕದೆ ಅವಳಷ್ಟಕ್ಕೆ ಅವಳ ಬಿಟ್ಟಿದ್ದರಿಂದ ಹೆಚ್ಚು ಅಂಕಕ್ಕೆ ಕಾರಣ ಎಂದು ತಾಯಿ ಲಲಿತಾ ಹೇಳಿದ್ದಾರೆ.

Exit mobile version