Site icon Kundapra.com ಕುಂದಾಪ್ರ ಡಾಟ್ ಕಾಂ

SSLC ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದೆಯೇ? ಚಿಂತೆಬಿಡಿ, ಪಿಯುಸಿಯಲ್ಲಿದೆ ಸುವರ್ಣಾವಕಾಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಎಸ್.ಎಸ್.ಎಲ್.ಸಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದೆಯಾ? ಆದರೂ ವಿಜ್ಞಾನ ವಿಷಯ ತೆಗೆದುಕೊಂಡು ಸಾಧನೆ ಮಾಡಬೇಕೆಂಬ ಆಕಾಂಕ್ಷೆ ಇದೆಯೇ? ಗಣಿತದಲ್ಲಿ ಕಡಿಮೆ ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲೊಂದು ಸದಾವಕಾಶವಿದೆ. ಅದುವೇ ಹೋಂ ಸೈನ್ಸ್ ( ಗೃಹ ವಿಜ್ಞಾನ – PCBH) ವಿಭಾಗ.

ಈ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ತಾಂತ್ರಿಕ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಲು ನೀಟ್ ಬರೆಯಲು ಅವಕಾಶವಿದೆ. ತನ್ಮೂಲಕ ವೈದ್ಯಕೀಯ ಕ್ಷೇತ್ರದ ಬೇರೆ ಬೇರೆ ಕೋರ್ಸುಗಳನ್ನು ಅಂದರೆ ಎಂ.ಬಿ.ಬಿ.ಎಸ್, ವೆಟರ್ ನರಿ, ಪ್ಯಾರಾ ಮೆಡಿಕಲ್, ಆಯುರ್ವೇದಿಕ್, ಡಯಟಿಶಿಯನ್ ಮತ್ತು ಹೋಮಿಯೋಪತಿಯಂತಹ ಮೊದಲಾದ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು. ಇದಲ್ಲದೆ ಬಿ. ಎಸ್ ಸಿ ನರ್ಸಿಂಗ್, ಇಂಟರಿಯರ್ ಡೆಕೋರೇಷನ್, ಹಾಗೂ ಜೈವಿಕ ವಿಜ್ಞಾನ ದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯುವ ವಿಫುಲ ಅವಕಾಶಗಳು ಇದೆ. ಇದರ ಸಂಪೂರ್ಣ ಸದುಪಯೋಗ ವನ್ನು ಆಸಕ್ತ ಗ್ರಾಮೀಣ ವಿದ್ಯಾರ್ಥಿಗಳು ಪಡೆಯಬಹುದು.

Click here for More detail https://kundapraa.com/mother-teresas-pu-college-sankaranarayanan/

Exit mobile version