Kundapra.com ಕುಂದಾಪ್ರ ಡಾಟ್ ಕಾಂ

ಮಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಪರಿಶೀಲನೆಗೆ ದುಬಾರಿ ಶುಲ್ಕ ಇಳಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪದವೀಧರರು ಉದ್ಯೋಗಕ್ಕೆ ಸೇರುವ ಸಂದರ್ಭ ಸಲ್ಲಿಸುವ ಅಂಕಪಟ್ಟಿಯ ಪರಿಶೀಲನೆ (ವೆರಿಫಿಕೇಶನ್) ಕಡ್ಡಾಯ. ಆದರೆ ಅಂಕಪಟ್ಟಿ ಪರಿಶೀಲನೆಗೆ ಮಂಗಳೂರು ವಿ.ವಿ.ಯ ವಿದ್ಯಾರ್ಥಿಗಳು ದುಬಾರಿ ಶುಲ್ಕ ತೆರಬೇಕಾಗಿದ್ದು, ಇದನ್ನು ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿ.ವಿ.ಯ ಉಪಕುಲಪತಿಗಳಿಗೆ ನೂತನ ಶಾಸಕ ಬೈಂದೂರಿನ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮನವಿ ಮಾಡಿದ್ದು ಮನವಿಗೆ ಮಂಗಳೂರು ವಿ.ವಿ. ಸ್ಪಂದಿಸಿದೆ.

ಪದವೀಧರ ತನ್ನ 6 ಸೆಮಿಸ್ಟರ್ಗಳ ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ

ಇತರ ಶುಲ್ಕ ಸೇರಿ ಒಟ್ಟು 10,800 ರೂ. ಪಾವತಿಸಬೇಕಾಗುತ್ತದೆ. ಇದು ಮಂಗಳೂರು ವಿ.ವಿ.ಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಹೊರೆಯಾಗಿತ್ತು. ತುಮಕೂರು ರಾಜ್ಯದಲ್ಲಿಯೇ 6 ವಿಷಯಗಳ ಅಂಕಪಟ್ಟಿಗೆ ಕೇವಲ 501 ರೂ. ಶುಲ್ಕವನ್ನಷ್ಟೇ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು, ಕರಾವಳಿಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು ಅನುಕೂಲ ಎಂದು ಆಗ್ರಹಿಸಿದ್ದರು.

ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಮನವಿಗೆ ಸ್ಪಂದಿಸಿದ ಮಂಗಳೂರು ವಿಶ್ವವಿದ್ಯಾಲಯ ಪ್ರತಿ ವಿಷಯದ ಅಂಕಪಟ್ಟಿಯ ಮೇಲೆ ರೂ.500 ಕಡಿಮೆ ಮಾಡಿದೆ. ಸಾವಿರಾರು ವಿದ್ಯಾರ್ಥಿಗಳ ಸಮಸ್ಯೆಗೆ ಧ್ವನಿಯಾಗಿದ್ದರು. ವಿ.ವಿ. ಶುಲ್ಕವನ್ನು ಕಡಿಮೆ ಮಾಡುವ ಮೂಲಕ ಪದವಿದಾರರಿಗೆ ಆರ್ಥಿಕ ಹೊರೆ ಕಡಿಮೆಯಾಗಿದೆ.

ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಾರೆ. ಅಂತಹ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಶಾಸಕರಾಗಿ ಹದಿನೈದು ದಿನದಲ್ಲೆ ಸಾವಿರಾರು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.

Exit mobile version