Site icon Kundapra.com ಕುಂದಾಪ್ರ ಡಾಟ್ ಕಾಂ

ನಿರೀಕ್ಷೆಯಂತೆ ದೊರಕದ ಉದ್ಯೋಗ. ಮನನೊಂದ ಯುವತಿ ಆತ್ಮಹತ್ಯೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಮೇ 29:
ನಿರೀಕ್ಷೆಯಂತೆ ಉದ್ಯೋಗ ದೊರಕದ ಕಾರಣ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ ಗೌತಮಿ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಎಂ.ಕಾಂ. ಪದವೀಧರೆಯಾದ ಗೌತಮಿ ಇತ್ತೀಚೆಗೆ ಬ್ಯಾಂಕ್ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ದೊರೆತಿರಲಿಲ್ಲ. ಹೀಗಾಗಿ ಯುವತಿ ಮನನೊಂದು ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನೇಣಿಗೆ ಶರಣಾಗಿದ್ದ ಗೌತಮಿ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version