Site icon Kundapra.com ಕುಂದಾಪ್ರ ಡಾಟ್ ಕಾಂ

ಮದಗದಲ್ಲಿ ಮುಳುಗಿ ಉಪನ್ಯಾಸಕ – ವಿದ್ಯಾರ್ಥಿ ದಾರುಣ ಸಾವು

ಕುಂದಾಪ್ರ ಡಾಟ್ ಕಾಂ‌ ಸುದ್ದಿ
ಕುಂದಾಪುರ:
ತಾಲೂಕಿನ ಉಳ್ಳೂರು – ಕಾಡಿನಕೊಂಡದ ಬಳಿ ಮದಗಗಕ್ಕೆ ಈಜಲು ತೆರಳಿದ ಉಪನ್ಯಾಸಕ ಸೇರಿದಂತೆ ಇಬ್ಬರು ನೀರುಪಾಲಾದ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.

ಶಂಕರನಾರಾಯಣ ಮದರ್ ಥೆರೆಸಾ ಕಾಲೇಜಿನ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ (28) ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ್ (15) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.

ಕಂದಾವರ ಗ್ರಾಮದ ಕಾಡಿನಕೊಂಡ ಬಳಿಯ ಡಂಪಿಂಗ್ ಯಾರ್ಡ್ ಬಳಿಯ ನಾಲ್ಕು ಎಕರೆ ವಿಸ್ತಾರದ ಸುಮಾರು 10 ಪೀಟ್ ನೀರಿರುವ ಮದಗದಲ್ಲಿ ಭರತ್ ಆಯತಪ್ಪಿ ಮುಳುಗಿದ್ದನ್ನು ನೋಡಿದ ರಾಜೇಂದ್ರ ರಕ್ಷಣೆಗೆ ತೆರಳಿದಾಗ ಈಜು ಬಾರದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಶಂಕರನಾರಾಯಣ ಸರಕಾರಿ ಹೈಸ್ಕೂಲು ವಿಧ್ಯಾರ್ಥಿ ಭರತ್ ರಜೆಯ ಕಾರಣ ತನ್ನ ತಾಯಿಯ ಮನೆಗೆ ಬಂದಿದ್ದ, ಬಹುಮುಖ ಪ್ರತಿಭಾವಂತ ರಾಜೇಂದ್ರ ಮಂಗಳೂರಿನ ಎಕ್ಸ್‌ಪಟ್೯ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ಶಂಕರನಾರಾಯಣ ಕಾಲೇಜಿಗೆ ಸೇರಿದ್ದರು.

ಅಗ್ನಿಶಾಮಕದಳಸ ಸಿಬ್ಬಂದಿಗಳು ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಬೆಳಿಗ್ಗೆ 11 ಗಂಟೆಗೆ ರಾಜೇಂದ್ರನ ಅಂತ್ಯಕ್ರಿಯೆ ಉಳ್ಳೂರು ಕಾಡಿನಕೊಂಡ, ಭರತ್ ಅಂತ್ಯಕ್ರಿಯೆ ಶಂಕರನಾರಾಯಣದ ಶಂಕಪುರದಲ್ಲಿ ನಡೆಯಲಿದೆ. ಎಂದು ತಿಳಿದಿದೆ.

Exit mobile version