Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಆತ್ಮಹತ್ಯೆಗೆ ಶರಣಾದ ಕ್ರಿಕೆಟ್ ಆಟಗಾರ ಶಶಿಕಾಂತ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಕೆರಾಡಿ ಗ್ರಾಮದ ಚಪ್ಪರಮಕ್ಕಿ ಕೂರ್ಕೊಗೆ ಎಂಬಲ್ಲಿ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆರಾಡಿ ನಿವಾಸಿಯಾದ ಶಶಿಕಾಂತ್ (25) ಮೃತ ಯುವಕ.

ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಹೋಗಿರುವುದನ್ನು ಗಮನಿಸಿದ ಶಶಿಕಾಂತನ ಮೊಬೈಲ್ಗೆ ಸ್ನೇಹಿತರು, ಆತನಿಗೆ ಕರೆ ಮಾಡಿದಾಗ ಪ್ರತಿಕ್ರಿಯಿಸದೇ ಇದ್ದುದರಿಂದ ಸಂಶಗೊಂಡು ಅಭಯಾರಣ್ಯದಲ್ಲಿ ಹುಡುಕುತ್ತಿರುವಾಗ ಚಾಕಟೆ ಮರಕ್ಕೆ ಸುತ್ತಿಕೊಂಡಿರುವ ಕುಮ್ಟಿ ಬೀಳಿಗೆ ಪಾಲ್ಸ್ನ ಬೀಳನ್ನು ಕಟ್ಟಿ ಇನ್ನೂಂದು ತುದಿಯನ್ನು ಕುತ್ತಿಗೆಗೆ ಉರಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಮೃತ ಶಶಿಕಾಂತ್ ರಾಷ್ಟೀಯ ಮಟ್ಟದ ಹ್ಯಾಂಡ್ಬಾಲ್ ಆಟಗಾರ, ರಾಜ್ಯಮಟ್ಟದ ಕ್ರಿಕೆಟ್ ಆಟಗಾರನಾಗಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version