Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಅಂಚೆ ಸೇವಕ ಆನಂದ ನಾಯ್ಕ್ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಂಡ್ಸೆ ಅಂಚೆ ಕಛೇರಿಯಲ್ಲಿ ಕಳೆದ 42 ವರ್ಷಗಳಿಂದ ಗ್ರಾಮೀಣ ಅಂಚೆ ಸೇವಕರಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತರಾದ ಆನಂದ ನಾಯ್ಕ್ ನ್ಯಾಗಳಮನೆ ವಂಡ್ಸೆ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ವಂಡ್ಸೆ ಅಂಚೆ ಕಛೇರಿ ಹಾಗೂ ಶಾಖಾ ಕಛೇರಿ ಸಿಬ್ಬಂದಿಗಳ ವತಿಯಿಂದ ನಡೆಯಿತು.

ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಂಡ್ಸೆ ಉಪ ಅಂಚೆ ಕಛೇರಿಯ ಅಂಚೆ ಪಾಲಕರಾದ ಸುರೇಖಾ ಜೆ.ಶೆಟ್ಟಿ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಜಿ. ಶ್ರೀಧರ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವಾತ್ಸಲ್ಯ ಕಾಂಪ್ಲೆಕ್ಸ್ ವಂಡ್ಸೆ ಇದರ ಮಾಲಕರಾದ ಆನಂದ ಶೆಟ್ಟಿ ಸಬ್ಲಾಡಿ, ವೈದ್ಯರಾದ ಡಾ.ಗೋಪಾಲಕೃಷ್ಣ ಐತಾಳ್ ಉಪಸ್ಥಿತರಿದ್ದರು.

ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಆನಂದ ನಾಯ್ಕ ಅವರ ಸೇವೆಯ ಕುರಿತು ಅತಿಥಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು. ಸಭಿಕರ ಪರವಾಗಿ ಶಿವರಾಮ ಹೊಳ್ಳ, ಪೋಸ್ಟ್ ಮ್ಯಾನ್ ರಾಜು ದೇವಾಡಿಗ, ಶೈಲಶ್ರೀ ಅನಿಸಿಕೆ ಹಂಚಿಕೊಂಡರು.

ಸನ್ಮಾನ, ಗೌರವ ಸ್ವೀಕರಿಸಿದ ಆನಂದ್ ನಾಯ್ಕ್ ಮಾತನಾಡಿ ಕಳೆದ ೪೨ ವರ್ಷಗಳ ಕಾಲ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ಹಿರಿಯ ಅಧಿಕಾರಿಗಳಿಗೆ ಹಾಗೂ ಊರಿನ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವಂಡ್ಸೆ ಅಂಚೆ ಕಛೇರಿ ಹಾಗೂ ಶಾಖಾ ಕಛೇರಿ ಸಿಬ್ಬಂದಿಗಳು, ಸ್ಥಳೀಯ ಗಣ್ಯರು ಹಾಜರಿದ್ದರು. ಶ್ರೇಯಾಂಕ್ ಪಿ.ಅಮೀನ್ ಪ್ರಾರ್ಥನೆ ಮಾಡಿದರು. ಪೋಸ್ಟಲ್ ಅಸಿಸ್ಟೆಂಟ್ ಗೋವಿಂದ ಶೆಟ್ಟಿ ಸ್ವಾಗತಿಸಿದರು. ಇಡೂರು ಬಿಪಿಎಂ ಪ್ರಸನ್ನ ವಂದಿಸಿದರು. ಪೋಸ್ಟಲ್ ಅಸಿಸ್ಟೆಂಟ್ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version