Kundapra.com ಕುಂದಾಪ್ರ ಡಾಟ್ ಕಾಂ

ಹಳ್ಳಿಬೇರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು
: ಜೆ ಸಿ ಐ ಉಪ್ಪುಂದದ ವತಿಯಿಂದ ಶೂನ್ಯ ಶಿಕ್ಷಕರನ್ನು ಹೊಂದಿರುವಂತಹ ಅತಿ ಹಿಂದುಳಿದ ಪ್ರದೇಶದಲ್ಲಿರುವ ಹಳ್ಳಿಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ರಿಷಾ ಡಯಾಗ್ನೋಸ್ಟಿಕ್ ಸೆಂಟರ್ ಮಾಲಕರಾದ ರಮೇಶ್ ಜೋಗಿ ಅವರು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ ತೀರಾ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತ ಇಂತಹ ಶಾಲೆಗೆ 50 ಕಿಲೋಮೀಟರ್ ದೂರದಿಂದ ಆಗಮಿಸಿ ಪುಸ್ತಕ ನೀಡುತ್ತಿರುವಂತಹದ್ದು ನಮಗೆ ತೃಪ್ತಿ ತಂದಿದೆ. ಯಾರಿಗೆ ತೀರ ಅಗತ್ಯವಿದೆ ಅಂತಹವರಿಗೆ ಕೊಡಬೇಕು ಅನ್ನುವ ಜೆ ಸಿ ಐ ಉಪ್ಪುಂದದ ತತ್ವವನ್ನು ಇಲ್ಲಿ ಪಾಲಿಸಿದ್ದೀವಿ ಎಂದು ಹೇಳಿದರು

ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದಂತಹ ಜೆಸಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು

ಜೆ ಸಿ ಐ ಉಪ್ಪುಂದದ ಪೂರ್ವಾಧ್ಯಕ್ಷರಾದಂತಹ ಜೆಸಿ ಪ್ರಕಾಶ್ ಭಟ್, ಜೆ ಸಿ ಶ್ರೀಗಣೇಶ್ ಗಾಣಿಗ, ಜೆಸಿ ಶಿವಾನಂದ ಗಾಣಿಗ, ಜೆಸಿ ಮೋಹನ್, ನಿಕಟ ಪೂರ್ವ ಅಧ್ಯಕ್ಷ ವಲಯ ನಿರ್ದೇಶಕ ಜೆಸಿ ನಾಗರಾಜ್ ಪೂಜಾರಿ ಉಬ್ಜೇರಿ,ಎಸ್ ಡಿ ಎಂ ಸಿ ಅಧ್ಯಕ್ಷರಾದಂತಹ ಅಶೋಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದಂತಹ ಶಿವರಾಜ್, ಅತಿಥಿ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕಿ ವನಿತಾ ಧನ್ಯವಾದ ಸಮರ್ಪಿಸಿದರು.

Exit mobile version