Kundapra.com ಕುಂದಾಪ್ರ ಡಾಟ್ ಕಾಂ

ಮರಿಚಿಕೆಯಾದ ಮುಂಗಾರು – 2 ದಿನ ಸಾಧಾರಣ ಮಳೆ, ಗರಿಗೆದರಿದ ಕೃಷಿ ಚಟುವಟಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜೂನ್ ತಿಂಗಳು ಮಗಿಯುತ್ತಾ ಬಂದರೂ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮಳೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಕೆಲ ಹೊತ್ತು ಸುರಿದಿದೆ. ಮಳೆಯ ವಿಳಂಬದಿಂದಾಗಿ ಕಂಗಾಲಾಗಿದ್ದ ರೈತಾಪಿ ವರ್ಗ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಜೂನ್ 1 ರಿಂದ ವಾಡಿಕೆಯಂತೆ 100ಮೀ. ಮೀ ಮಳೆಯಾಗಬೇಕಿದ್ದು, ಈತನಕ ಕೇವಲ 30ಮಿ.ಮೀ. ಮಳೆಯಾಗಿದೆ. ನೀರಿನ ಮೂಲಗಳು ಬತ್ತಿದ್ದು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿತ್ತು. ಮಳೆಗಾಲ ಆರಂಭಗೊಂಡರೂ ನಿರೀಕ್ಷಿತ ಮಳೆಯಾಗದೇ ಇದ್ದುದರಿಂದ ಬೀಜ ಬಿತ್ತನೆಯೂ ಕಷ್ಟವಾಗಿತ್ತು. ಕೆಲವೆಡೆ ಕೃತಕ ನೀರಿನ ಮೂಲಗಳನ್ನು ಬಳಸಿ ಬಿತ್ತನೇ ಮಾಡಿದ್ದರೂ, ನಾಟಿ ಕಾರ್ಯಕ್ಕೆ ಮಳೆ ನಿರೀಕ್ಷೆಯಲ್ಲಿದ್ದರು. ಇದೀಗ ಮಳೆಯ ಛಾಯೆ ಕಾಣಿಸಿಕೊಂಡಿರುವುದು ರೈತರಲ್ಲಿ ಕೊಂಚ ನೆಮ್ಮದಿ ಕಾಣುವಂತಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Exit mobile version