Kundapra.com ಕುಂದಾಪ್ರ ಡಾಟ್ ಕಾಂ

ಸಿ.ಎ ಫೈನಲ್ ಪರೀಕ್ಷೆಯಲ್ಲಿ ವೃಂದಾ ವಿ. ಕಿಣಿ ಉತ್ತೀರ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಐ.ಸಿ.ಎ.ಐ ಇನ್ಸ್ಟಿಟ್ಯೂಟ್ ಓಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಉಡುಪಿಯ ತ್ರಿಶಾ ಕ್ಲಾಸಸ್ ವಿದ್ಯಾರ್ಥಿನಿ ವೃಂದಾ ವಿ. ಕಿಣಿ ಉತ್ತೀರ್ಣರಾಗಿದ್ದಾರೆ.

ಸಿ.ಎ ಗಿರಿಧರ್ ಕಾಮತ್ ಅವರ ‘ಗಣೇಶ್ ಆಂಡ್ ಸುಧೀರ್ ಕೋ ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು 2021 ರಲ್ಲಿ ಮುಗಿಸಿದ್ದರು. ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ಹಾಗೂ ಫೈನಲ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ. ವೃಂದಾ ಕಿಣಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ನಯನಾ ವಿ. ಕಿಣಿ ದಂಪತಿಯ ಪುತ್ರಿ.

Exit mobile version