ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಾ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಕೆ.ಪಿ.ಸಿ.ಸಿ ವತಿಯಿಂದ ರಾಹುಲ್ ಗಾಂಧಿಯವರ ಬೆಂಬಲವಾಗಿ ಇಂದು ದೇಶಾದ್ಯಂತ ಏಕಕಾಲದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದ ಭಾಗವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ನ ವತಿಯಿಂದ ಬುಧವಾರ ‘ಮೌನಪ್ರತಿಭಟನೆ’ ನಡೆಯಿತು.

ಕುಂದಾಪುರ ಶಾಸ್ತ್ರೀ ವೃತ್ತದ ಬಳಿಕ ನಡೆದ ಮೌನ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ದೇವಾನಂದ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಬಿ. ಹಿರಿಯಣ್ಣ, ವಿಕಾಸ ಹೆಗ್ಡೆ, ಕೃಷ್ಣದೇವ ಕಾರಂತ, ಬೀಜಾಡಿ ಅಶೋಕ್ ಪೂಜಾರಿ, ಗಣೇಶ್ ಶೇರೆಗಾರ, ಮರತ್ತೂರು ಚಂದ್ರಶೇಖರ ಶೆಟ್ಟಿ, ಕೋಡಿ ಅಬ್ದುಲ್ಲಾ, ಭಾಸ್ಕರ ಶೆಟ್ಟಿ, ವಕ್ವಾಡಿ ರಮೇಶ್ ಶೆಟ್ಟಿ, ಕೇಶವ ಭಟ್, ಕೋಣಿ ನಾರಾಯಣ ಆಚಾರ್, ವಿನೋದ್ ಕ್ರಾಸ್ತಾ, ಪ್ರಭಾವತಿ ಶೆಟ್ಟಿ, ಚಂದ್ರಶೇಖರ ಖಾರ್ವಿ, ಶ್ರೀಧರ್ ಶೇರೆಗಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ನಡೆದ ಮೌನ ಪ್ರತಿಭಟನೆಯಲ್ಲಿ ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಎ. ಕುಂದರ್, ಕಾಂಗ್ರೆಸ್ ಮುಖಂಡರಾದ ಯಡ್ತಾಡಿ ರಘು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ನ ಮಹಿಳಾ ಅಧ್ಯಕ್ಷೆ ರೇಖಾ ಪಿ ಸುವರ್ಣ, ಬಾಲಕೃಷ್ಣ ಪೂಜಾರಿ ಸಸ್ತಾನ, ರೋಷಣಿ ಒಲವೇರ, ಬಿ.ಕೆ ತೇಜು ಪೂಜಾರಿ, ರವೀಂದ್ರ ಕಾಮತ್ ಗುಂಡ್ಮಿ, ಚಂದ್ರ ಆಚಾರ್ ಕೋಟ, ಚಿತ್ತರಂಜನ್ ದಾಸ್ ಶೆಟ್ಟಿ ಅವರ್ಸೆ, ಶ್ರೀಕಾಂತ್ ಆಚಾರ್ ಪಾಂಡೇಶ್ವರ, ಬಿ. ರಾಘವೇಂದ್ರ, ಅಜಿತ್ ಎಲ್ಹಕ್ಳು, ಶ್ರೀನಿವಾಸ್ ವಡ್ಡರ್ಸೆ, ಮಹಾಬಲ ಮಡಿವಾಳ, ದಿನೇಶ್ ಬಂಗೇರ ಗುಂಡ್ಮಿ, ಮೊದಲಾದವರು ಉಪಸ್ಥಿತರಿದ್ದರು
ಇದನ್ನೂ ಓದಿ:
► ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷ ರಾಜಕಾರಣ: ಬೈಂದೂರು – ವಂಡ್ಸೆ ಬ್ಲಾಕ್ ಕಾಂಗ್ರೆಸ್ ಮೌನ ಪ್ರತಿಭಟನೆ – https://kundapraa.com/?p=67665 .
.