Kundapra.com ಕುಂದಾಪ್ರ ಡಾಟ್ ಕಾಂ

ಉತ್ಸವಗಳು ನಮ್ಮೊಳಗಿನ ಮಾನವೀಯ ಗುಣವನ್ನು ಎಚ್ಚರಿಸುತ್ತದೆ: ಓಂ ಗಣೇಶ್

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಶಾರದೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಬೈಂದೂರು: ಉತ್ಸವಗಳು ಪ್ರಕೃತಿ, ಸಂಸ್ಕೃತಿ, ಪರಂಪರೆ ಹಾಗೂ ಬಾಂಧ್ಯವ್ಯನನ್ನು ಗಟ್ಟಿಗೊಳಿಸುವುದರೊಂದಿಗೆ ನಮ್ಮೊಳಗಿನ ರಾಕ್ಷಸೀತನವನ್ನು ಹೋಗಲಾಡಿಸಿ ಮಾನವೀಯತೆಯನ್ನು ಹೊರತರಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ ಎಂದು ಉಪ್ಪುಂದ ಓಂಗಣೇಶ್ ಕಾಮತ್ ಅಭಿಪ್ರಾಪಟ್ಟರು.

ಬೈಂದೂರು ಶ್ರೀಸೇನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

[quote bgcolor=”#ffffff” arrow=”yes” align=”right”]* ಜಾತಿ-ಧರ್ಮಗಳ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕದಡುವ ಇಂದಿನ ದಿನಗಳಲ್ಲಿ ಇಂತಹ ಉತ್ಸವಗಳ ಮೂಲಕ ಸೌಹಾರ್ದತೆಯ ಸಂದೇಶ ನೀಡುವ ಮೂಲಕ ನಮ್ಮೊಳಗಿನ ಬಾಂದವ್ಯ ಗಟ್ಟಿಗೊಳಿಸಬೇಕು.- ರಂಗಕರ್ಮಿ ಬಿ. ಗಣೇಶ ಕಾರಂತ್ ಬೈಂದೂರು[/quote]

ಮಾಗಿದ ಮೇಲೆ ಬಾಗುವುದು ಪ್ರಕೃತಿ ನಿಯಮ. ಆದರೆ ಈಗಿನ ಕಾಲಘಟ್ಟದಲ್ಲಿ ಮಾಗಿದ ಮೇಲೆ ಬೀಗುವುದನ್ನು ಕಾಣುತ್ತೇವೆ. ತ್ಯಾಗಕ್ಕೆ ಯಾರು ಆದರ್ಶ ಹಾಗೂ ಮಾದರಿಯಾಗಿರುವರೋ ಅವರು ’ಯಜಮಾನ’ ಅನ್ನಿಸಿಕೊಂಡರೆ ನಮ್ಮೊಳಗಿನ ಕೆಟ್ಟವಿಚಾರಗಳನ್ನು ಕಳೆದುಕೊಳ್ಳಲು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಇರುವ ಸ್ಥಳ ’ದೇವಸ್ಥಾನ’ ಎಂದರು.

ಸಮಿತಿಯ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಬಿ. ಗಣೇಶ ಕಾರಂತ್, ಉದ್ಯಮಿ ಬಿ. ಜಗನ್ನಾಥ ಶೆಟ್ಟಿ, ಗೌ.ಸಲಹೆಗಾರರಾದ ಗಿರೀಶ್ ಬೈಂದೂರ್, ಉದಯ್ ಎಸ್. ಪಡಿಯಾರ್ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ನಾಗರಾಜ ಗಾಣಿಗ ಸ್ವಾಗತಿಸಿ, ಕಾರ್ಯದರ್ಶಿ ಬಿ. ಗೋಪಾಲ ಗಾಣಿಗ ವಂದಿಸಿದರು. ಕಾರ್ಯಕ್ರಮ ಮೇಲ್ವಿಚಾರಕ ನರಸಿಂಹ ಬಿ. ನಾಯಕ್ ನಿರೂಪಿಸಿದರು.

Exit mobile version