Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಆನಗಳ್ಳಿಯ ರಕ್ತದಾನ ಶಿಬಿರದಲ್ಲಿ ದಾಖಲೆಯ 310 ಯುನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ರಿ. ಆನಗಳ್ಳಿ, ಗೆಳೆಯರ ರಿ. ಆನಗಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ.ಉಡುಪಿ, ರಿಜಾಯ್ಸ್ ಇವೆಂಟ್ ಗ್ರೂಪ್ ಆನಗಳ್ಳಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಸಹಕಾರದಲ್ಲಿ ಆನಗಳ್ಳಿಯ ಗೆಳೆಯರ ಬಳಗ ಕಲಾಮಂದಿರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಭಾನುವಾರ ಜರುಗಿತು.

ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ವಿ ನಾಯಕ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ನ್ಯಾಯಕ್ಕಾಗಿ ನಾವು ಕಾನೂನು ಹೋರಾಟ ಮಾಡಬಹುದು ಆದರೆ ರಕ್ತವನ್ನು ಯಾವುದೇ ಹೋರಾಟದ ಮೂಲಕ ಪಡೆಯಲಾಗಿದು. ಯುವ ಸಮೂಹ ಸ್ವಯಂಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಉಳಿವಿಗೆ ನ್ಯಾಯ ಸಿಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜಯಕರ್ ಶೆಟ್ಟಿ, ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ,ಡಾ. ಸೋನಿ ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ, ಡಾ.ಆನ್ಸಿ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಉಮೇಶ್ ಕಾಂಚನ್ ಅಧ್ಯಕ್ಷರು, ಗೆಳೆಯರ ಬಳಗ ಆನಗಳ್ಳಿ, ಸತೀಶ್ ಸಾಲ್ಯಾನ್ ಮಣಿಪಾಲ, ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಸುಧೀರ್ ಕೆ ಎಸ್. ಮುಖಂಡರು ಬಿಜೆಪಿ, ಸಿಂಚನ ಸುಭಾಷ್ ಪೂಜಾರಿ ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಭಾಸ್ಕರ್ ಬಿಲ್ಲವ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಕುಂದಾಪುರ, ಸುನೀಲ್ ಶೆಟ್ಟಿ ಹೇರಿಕುದ್ರು ಮುಖಂಡರು ಬಿಜೆಪಿ ಹಾಗೂ ರಕ್ತದಾನ ಶಿಬಿರ ರೂವಾರಿ ಶರತ್ ಕಾಂಚನ್ ಆನಗಳ್ಳಿ ಉಪಸ್ಥಿತ್ತರಿದ್ದರು.

ನಂತರದಲ್ಲಿ ಭೇಟಿ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ತರೆಮರೆಯ ಸಾಧಕರಾದ ಪ್ರಭಾ ರಾವ್ (ಕೆಎಂಸಿ ಮಣಿಪಾಲ) ಹಾಗೂ ಪ್ರೇಮ ( ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ) ಅವರನ್ನು ಸಮ್ಮಾನಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರಕ್ತದಾನ ಶಿಬಿರದಲ್ಲಿ ದಾಖಲೆಯ 310 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು

Exit mobile version