Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಮಹಿಳಾ ಯಕ್ಷಗಾನ, ಸನ್ಮಾನ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಅಕ್ಟೋಬರ್ ತಿಂಗಳ ಕಾರ್ಯಕ್ರಮವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸುಪುತ್ರರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರ ಪ್ರಾಯೋಜಕತ್ವದಲ್ಲಿ ಅ.೧೮ರಂದು ಶ್ರೀಮತಿ ವರದಾ ಮಧುಸೂದನ ಐತಾಳ್‌ರ ನೇತೃತ್ವದ ಶ್ರೀ ಸಾಯಿ ಕಲಾ ಪ್ರತಿಷ್ಠಾನ ಶಿವಮೊಗ್ಗ ಇವರಿಂದ ದಕ್ಷ ಯಜ್ಞ ಮಹಿಳಾ ಯಕ್ಷಗಾನ ಜರುಗಿತು.

ದಿ.ಯಜ್ಞನಾರಾಯಣ ಐತಾಳ್‌ರ ಸವಿ ನೆನಪಿಗಾಗಿ ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀಮತಿ ಎಂ.ಎಂ. ಕ್ರಾಸ್ತಾ ಹಾಗೂ ಉಪ್ಪಿನಕುದ್ರು ರಮೇಶ್ ಐತಾಳ್‌ರನ್ನು ಸನ್ಮಾನಿಸಿದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ಕಾರ್ಯಕ್ರಮದ ಪ್ರಾಯೋಜಕರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರನ್ನು ಗೌರವಿಸಿದರು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಟಿ.ಎನ್.ಪ್ರಭು ತಲ್ಲೂರು ಉಪಸ್ಥಿತರಿದ್ದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದ್ದರು.

Exit mobile version