Site icon Kundapra.com ಕುಂದಾಪ್ರ ಡಾಟ್ ಕಾಂ

ಜಡ್ಕಲ್: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಜಡ್ಕಲ್ ಗ್ರಾಮದ ಮೆಕ್ಕೆ ಕೊಳಕೆಹೊಳೆ ಎಂಬಲ್ಲಿ ಜು.23ರಂದು ಮನೆಯಿಂದ ನಾಪತ್ತೆಯಾಗಿದ್ದ ಸುರೇಶ (28) ಎಂಬುವವರ ಮೃತದೇಹ ಶನಿವಾರ ಸಂಜೆ ಹೊಳೆಯಲ್ಲಿ ಪತ್ತೆಯಾಗಿದೆ.

ಸುರೇಶ್ ಅವರು ಮನೆಯಿಂದ ಬಹಿರ್ದಸೆಗೆ ಹೋದ ಸಂದರ್ಭ ಕಳೆದ ವಾರ ವಿಪರೀತ ಮಳೆಯಿದ್ದರಿಂದ ತುಂಬಿ ಹರಿಯುವ ಹೊಳೆಗೆ ಬಿದ್ದು ಕೊಚ್ಚಿಹೋಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಕಾನ್ಕಿ ಹಾಸ್ಕಲ್ ಪಾರೆಯ ಮೆಕ್ಕೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಕೊಲ್ಲೂರು ಠಾಣೆ ಪಿಎಸ್ಐಗಳಾದ ಜಯಶ್ರೀ, ಸುಧಾರಾಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

► ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ – https://kundapraa.com/?p=68085 .

Exit mobile version