Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರದಲ್ಲಿ ಜಿ.ಎಸ್.ಬಿ. ಚೆಸ್ ಪಂದ್ಯಕೂಟ: ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ (ರಿ) ಕೋಟೇಶ್ವರ ಮತ್ತು ಶ್ರೀ ರಾಮ ಸೇವಾ ಸಂಘ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ರವರ ಸಹಯೋಗದೊಂದಿಗೆ ಗೌಡ ಸಾರಸ್ವತ ಸಮಾಜ (ಜಿ.ಎಸ್.ಬಿ) ಬಾಂಧವರಿಗೆ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ರಾಪಿಡ್ ಚೆಸ್ ಪಂದ್ಯಕೂಟ ಕೊಂಕಣ್ ಟ್ರೋಫಿ – 2023ರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ದಿನೇಶ ಕಾಮತ್, ಈ ಆಟದ ಮೂಲ ಭಾರತ. ಚದುರಂಗವೆನ್ನುವ ಹೆಸರಿನಿಂದ ಪ್ರಾರಂಭಗೊಂಡು ನಂತರ ವಿವಿಧ ಕಾಲಘಟ್ಟದಲ್ಲಿ ಹೊಸ ರೂಪವನ್ನು ಪಡೆದು ಚೆಸ್ ಎನ್ನುವ ಹೆಸರಿನಿಂದ ವಿಶ್ವದಾದ್ಯಂತ ಪ್ರಖ್ಯಾತಗೊಂಡಿತು. ನಮ್ಮ ಸಮಾಜದಲ್ಲಿ ಈ ಆಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಡುವಂತಾಗಲಿ ಹಾಗೂ ಇಂತಹ ಪಂದ್ಯಕೂಟದಿಂದ ಆಟಗಾರರಿಗೆ ಉತ್ತಮ ವೇದಿಕೆ ನಿರ್ಮಾಣವಾಗಲಿ. ಪಂದ್ಯಾಟವನ್ನು ಆಯೋಜಿಸಿ, ಎಲ್ಲರನ್ನೂ ಒಗ್ಗೂಡಿಸುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಡಾ.ಗಣೇಶ್ ಕಾಮತ್, ಆಟಕೆರೆ ವಿಶ್ವನಾಥ್ ಪೈ, ಗಣೇಶ್ ಕಿಣಿ ಬೆಳ್ವೆ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಆಟಗಾರರಿಗೂ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಅಂತರಾಷ್ಟ್ರೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ತಿಪ್ಸೆ ಸಹಿ ಮಾಡಿದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ನರೇಶ್ ಭಟ್ ನಿರೂಪಿಸಿ, ಪುರುಷೋತ್ತಮ್ ಕಾಮತ್ ಧನ್ಯವಾದಗೈದರು. ವಿವಿಧ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ಸುಮಾರು 30 ವಿಜೇತರಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಯಿತು.

ಪ್ರಥಮ ಸ್ಥಾನ ಪಡೆದ ವಿಜೇತರ ಹೆಸರು:
ಮುಕ್ತ ವಿಭಾಗದಲ್ಲಿ ಪ್ರವೀಣ್ ಕಾಮತ್, U-8(ಹುಡುಗರ)
ಅಜಯ್ ಮಂಜುನಾಥ್ ಭಟ್, U-8(ಹುಡುಗಿಯರ) ವೇದಿಕಾ ನಾಯಕ್ ಬಿ, U-10(ಹುಡುಗರ) ವಿಭಾಗದಲ್ಲಿ ಅಭಯ್ ಕಾಮತ್, U-10(ಹುಡುಗಿಯರ) ವಿಭಾಗದಲ್ಲಿ ಜಾನ್ವಿ ಮಲ್ಯ, U-13(ಹುಡುಗರ) ವಿಭಾಗದಲ್ಲಿ
ಭರತ್ ಕೆ ವಿ ಭಟ್,
U-13(ಹುಡುಗಿಯರ) ವಿಭಾಗದಲ್ಲಿ ಸಂಹಿತಾ ಶೆಣೈ,
U-15(ಹುಡುಗರ) ವಿಭಾಗದಲ್ಲಿ ವೆಂಕಟೇಶ್ ನಾಯಕ್ ಬಿ,
U-15(ಹುಡುಗಿಯರ) ವಿಭಾಗದಲ್ಲಿ ದಿಶಾ ಯು ಎ, ಅಲ್ಲದೇ ವಿಶೇಷ ಬಹುಮಾನಗಳಾದ
ಉತ್ತಮ ಹಿರಿಯ ಆಟಗಾರ ಕೆ ರಾಮನಾಥ್ ಕಿಣಿ,
ಉತ್ತಮ ಮಹಿಳಾ ಆಟಗಾರ್ತಿ ಆಶಾ ನಾಯಕ್,
ಉತ್ತಮ ಕಿರಿಯ ಆಟಗಾರ ದಕ್ಷ್ ಪ್ರಭು.

ತೀರ್ಪುಗಾರರಾಗಿ ಬಾಬು ಪೂಜಾರಿ, ಧನರಾಜ್, ಅಣ್ಣಪ್ಪ, ಗುರುರಾಜ್ ಶೆಟ್ಟಿ ಸಹಕರಿಸಿದರು. ಕುಂದಾಪುರದ ಕಶ್ವಿ ಚೆಸ್ ಸ್ಕೂಲಿನ ನರೇಶ್ ಬಿ ಅವರು ಪಂದ್ಯಾಕೂಟದ ನೇತೃತ್ವ ವಹಿಸಿದ್ದರು.

ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ಮಂಗಳೂರಿನ ಸುಮಾರು 110 ಸ್ಪರ್ಧಾಳುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದರು.

Exit mobile version