Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಶಿಕ್ಷಪ್ರಭ ಅಕಾಡೆಮಿ: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ 20 ವಿದ್ಯಾರ್ಥಿಗಳು ತೇರ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಸಾಧನೆಗೈದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ವಿತಾ ಎ (286), ಕೃತಿಕಾ (248), ಪೌರ್ಣಮಿ ಐತಾಳ್ (243), ಪ್ರೇಕ್ಷಿತಾ (243), ದೀಕ್ಷಿತಾ ಗೋಪಾಲ್ (238), ಚಿರಾಗ್ ಮೆಂಡನ್ (232), ಶ್ರಾವ್ಯ ಪೂಜಾರಿ (227), ಸುಜನಾ(223), ಆಶಿಷ್ ಶೆಟ್ಟಿ(222), ತರುಣ್ (218), ಅಶ್ವಿತಾ (216), ಸುಜೇತಾ ಶೆಟ್ಟಿ (214), ಅಖಿಲೇಶ್ (211), ಪೂಜಾ ಶೇಟ್(210), ಸೂರಜ್ ಆಚಾರ್ (208), ನಿಶಿತಾ (207), ತೇಜಸ್ವಿ ಪೋಜಾರಿ (207), ಛಾಯ ಕಿರಣ್ (205), ಸುಶ್ಮಿತಾ (200), ಶ್ರಾವ್ಯ ಭಟ್ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಶಿಕ್ಷಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದ್ದು ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗದಲ್ಲಿದ್ದಾರೆ. ಸಂಸ್ಥೆಯ ಬೋಧಕ ಸಿಬ್ಬಂದಿ ವರ್ಗ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

Exit mobile version