Site icon Kundapra.com ಕುಂದಾಪ್ರ ಡಾಟ್ ಕಾಂ

ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ 2023-24ನೇ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ ನಡೆಯಿತು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಪದಪ್ರದಾನವನ್ನು ನೆರವೇರಿಸಿದರು. ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ರಕ್ಷಿತಾ ತಮ್ಮ ತಂಡವನ್ನು ಪರಿಚಯಿಸಿದರು. ಕಾರ್ಯದರ್ಶಿ ಅಮೃತಾ ವರ್ಷದ ಯೋಜನೆಗಳನ್ನು ಸಭೆಯ ಮುಂದಿಟ್ಟರು.

ಪೂರ್ವ ಸಹಾಯಕ ಗವರ್ನರ್ ರೊ. ಸೋಮನಾಥನ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನರ್ವ್ಹೀಲ್ ಅಧ್ಯಕ್ಷೆ ಚಂದ್ರಿಕಾ ರಾಮು,ರೋಟರಿ ಬೈಂದೂರಿನ ಪೂರ್ವಾಧ್ಯಕ್ಷರಾದ ಸುಧಾಕರ ಪಿ, ಐ ನಾರಾಯಣ, ಮಂಜುನಾಥ ಮಹಾಲೆ, ಡಾ. ಪ್ರವೀಣ ಶೆಟ್ಟಿ, ಶಾಲೆಯ ಶಿಕ್ಷಕ ವ್ರಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ರೊ.ಆನಂದ ಮದ್ದೋಡಿ ಸ್ವಾಗತಿಸಿದರು. ಇಂಟರ್ಯಾಕ್ಟ್ ಸಂಯೋಜಕ ಪ್ರಕಾಶ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಯಡ್ತರೆ ವಂದಿಸಿದರು.

Exit mobile version